Kodagu

ಪೊನ್ನಂಪೇಟೆಯಲ್ಲಿ ನ.1ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ

admincoorgdaily

ಪೊನ್ನಂಪೇಟೆಯಲ್ಲಿ ನ.1ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ
ಪೊನ್ನಂಪೇಟೆ, ಅ.28: ಪೊನ್ನಂಪೇಟೆಯ ಸ್ನೇಹಿತರ ಬಳಗದ ವತಿಯಿಂದ ನವೆಂಬರ್ 1ರಂದು 3ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಸುರೇಶ್ ಹೆಚ್.ಬಿ ತಿಳಿಸಿದ್ದಾರೆ.

ಈ ಕುರಿತು ಪೊನ್ನಂಪೇಟೆಯ ಬಳಗದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಕರ್ಷಕ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಂದು ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿ ಸ್ತಬ್ಧಚಿತ್ರಗಳು, ವಾದ್ಯಗೋಷ್ಠಿ, ಕನ್ನಡಾಂಬೆಯ ಭಾವಚಿತ್ರಗಳನ್ನು ಒಳಗೊಂಡ ವಾಹನಗಳು ಹಾಗೂ ಪುಟಾಣಿ ಮಕ್ಕಳ ಛದ್ಮವೇಷದ ಮೆರವಣಿಗೆ ನಡೆಯಲಿದೆ. ಸುಳ್ಯದ  ಗೋಪಾಲಕೃಷ್ಣ  ಅವರಿಂದ ಗೊಂಬೆ ಕುಣಿತ , ಚಿಕ್ಕಮಗಳೂರಿನ ಪವನ್ ಕುಮಾರ್ ತಂಡದಿಂದ ಗೊರಿಲ್ಲಾ ಕುಣಿತ ಹಾಗೂ ಡೊಳ್ಳುಕುಣಿತ ಪ್ರದರ್ಶನಗೊಳ್ಳಲಿದೆ. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ವೈಭವವನ್ನು ಸಾರಲಿವೆ ಎಂದು ಹೇಳಿದರು.

ಶೋಭಾಯಾತ್ರೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರಾದಾಶ್ರಮದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಮಹಿಳಾ ಸಮಾಜದವರೆಗೆ ಸಾಗಿ ಮರಳಿ ಬಂದು  ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಪನ್ನಗೊಳ್ಳಲಿದೆ. ಬಳಿಕ ಸಾರ್ವಜನಿಕರಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.

ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸುರೇಶ್ ಟಿ.ವಿ,ಕಾರ್ಯದರ್ಶಿ ಹರೀಶ್ ಈ. ಎ, ಖಜಾಂಚಿ ಮಣಿ ಎ. ಪಿ, ಮಹೇಶ್ ಹೆಚ್. ಎಸ್, ದಿನೇಶ್ ಟಿ. ಆರ್, ಮುರುಳಿ ಟಿ. ವಿ, ರುದ್ರಪ್ಪ ವಿ. ವಿ, ನಾಗರಾಜು, ಅಣ್ಣಪ್ಪ, ಸುರೇಶ್ ಪಿ. ಟಿ, ಸೂರ್ಯ, ಗೋಪಾಲ, ಮಂಜು, ಮಂಜುನಾಥ್, ಮಧು, ಸುರೇಶ್ ಕುಮಾರ್, ಪ್ರಭಾಕರ್, ಗಿರಿ ಇದ್ದರು.