Kodagu

ಕಾಫಿ ತೋಟದ ದಾರಿಯಲ್ಲಿ ಒಂಟಿ ಸಲಗ ದಾಳಿ; ಕೂದಲೆಳೆಯ ಅಂತರದಲ್ಲಿ ಸವಾರ ಪಾರು

admincoorgdaily

ಸಾಂದರ್ಭಿಕ ಚಿತ್ರ (Ai)
ಸಿದ್ದಾಪುರ; ಸಮೀಪದ ಗುಹ್ಯ ಗ್ರಾಮದಲ್ಲಿ ಒಂಟಿ ಸಲಗವೊಂದು ಬೈಕ್ ಸವಾರನ ಮೇಲೆ ದಾಳಿ ನಡೆಸಿದ್ದು, ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಸಿದ್ದಾಪುರ ನಿವಾಸಿ ಹೆಚ್.ಬಿ. ವಿಶ್ವನಾಥ್ ಎಂಬುವವರು ಗುಹ್ಯ ಗ್ರಾಮದ ವುಡ್‌ಲ್ಯಾಂಡ್ ಕಾಫಿ ತೋಟಕ್ಕೆ ತಮ್ಮ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಏಕಾಏಕಿ ಒಂಟಿ ಸಲಗ ಎದುರಾಗಿ ದಾಳಿಗೆ ಮುಂದಾಗಿದೆ. ಆತಂಕಗೊಂಡ ಸವಾರ ಬೈಕ್ ಬಿಟ್ಟು ಓಡಿ ಹೋಗಿ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

ಕೋಪಗೊಂಡ ಸಲಗ ಬೈಕ್ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ. ಈ ಬಗ್ಗೆ ವಿಶ್ವನಾಥ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಒಂಟಿ ಸಲಗದ ಓಡಾಟ ಹೆಚ್ಚಾಗಿದ್ದು, ಕಾಫಿ ಬೆಳೆಗಾರರು, ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.