Kodagu

ಯಡವನಾಡು, ಅತ್ತೂರು ಕಂದಾಯ ಗ್ರಾಮ ಪುನರ್ ಸ್ಥಾಪನೆಗೆ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಸಚಿವರಿಗೆ ಮನವಿ

admincoorgdaily

ಯಡವನಾಡು, ಅತ್ತೂರು ಕಂದಾಯ ಗ್ರಾಮ ಪುನರ್ ಸ್ಥಾಪನೆಗೆ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಸಚಿವರಿಗೆ ಮನವಿ
1002539814.jpg


ಬೆಂಗಳೂರು: ಸೋಮವಾರಪೇಟೆ ತಾಲೂಕಿನ ಯಡವನಾಡು ಹಾಗೂ ಅತ್ತೂರು ಕಂದಾಯ ಗ್ರಾಮಗಳನ್ನು ರದ್ದುಗೊಳಿಸಿರುವುದನ್ನು ಮರು ಪರಿಶೀಲಿಸಿ, ಪುನರ್ ಸ್ಥಾಪಿಸುವಂತೆ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ರೈತರು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ನರೇಂದ್ರ ಸ್ವಾಮಿ  ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಯಡವನಾಡು ಹಾಗೂ ಅತ್ತೂರು ಈ ಹಿಂದೆ ಕಂದಾಯ ಗ್ರಾಮಗಳಾಗಿದ್ದು, ನಂತರ ರದ್ದುಗೊಂಡಿವೆ. ಇದರಿಂದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಎರಡೂ ಗ್ರಾಮಗಳನ್ನು ಪುನಃ ಕಂದಾಯ ಗ್ರಾಮಗಳನ್ನಾಗಿ ಸ್ಥಾಪಿಸಬೇಕು ಎಂದು ವಿಧಾನಸೌಧದಲ್ಲಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಲಾಯಿತು.

ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಂಡು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಯಡವನಾಡು ಗ್ರಾಮದ ಟಿ.ಕೆ. ರಮೇಶ್, ಮೋಹನ್, ಗಣೇಶ್, ಡಿ.ಎಂ. ರಮೇಶ್, ಸುರೇಶ್, ವಕೀಲರಾದ ಪ್ರದೀಪ್, ಲೋಕೇಶ್ ಉಪಸ್ಥಿತರಿದ್ದರು.