ಬೈಕ್ ಡಿಕ್ಕಿಯಾಗಿ ಬಿದ್ದ ಯುವಕನ ಮೇಲೆ ಹಾಲಿನ ಟ್ಯಾಂಕರ್ ಹರಿದು ಸಾವು
admincoorgdaily

ಕುಶಾಲನಗರ, ಸೆ.17:ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಸವಾರನ ಮೇಲೆ ಹಾಲಿನ ಟ್ಯಾಂಕರ್ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕೂಡುಮಂಗಳೂರು ಗ್ರಾಮದ ಬಳಿ ನಡೆದಿದೆ.
ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಬೈಕ್ ಸವಾರರು ಓವರ್ ಟೇಕ್ ಮಾಡುವ ಭರದಲ್ಲಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ನೆಲಕ್ಕುರುಳಿದ ಸವಾರನ ಮೇಲೆ ಹಿಂದಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಹರಿದಿದೆ.
ಪರಿಣಾಮ ಬ್ಯಾಡಗೊಟ್ಟದ ಸುಬ್ರಮಣಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.