Kodagu

ಇಂದಿನಿಂದ ಸೆ.25ರವರೆಗೆ ಆಧಾರ್ ನೋಂದಣಿ – ತಿದ್ದುಪಡಿ ಶಿಬಿರ

admincoorgdaily

ಇಂದಿನಿಂದ ಸೆ.25ರವರೆಗೆ  ಆಧಾರ್ ನೋಂದಣಿ – ತಿದ್ದುಪಡಿ ಶಿಬಿರ
ಮಡಿಕೇರಿ: ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ತಾ. 23 ರಿಂದ ತಾ. 25 ರವರೆಗೆ ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು, ತಮ್ಮ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ತಿದ್ದುಪಡಿಯನ್ನು ಮಾಡಿಸಿಕೊಳ್ಳುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.