ಚೆತ್ ಕಲ್ಲು ಲಾರಿಗಳಿಂದ ಹಫ್ತಾ ವಸೂಲಿ ಆರೋಪ - ಶಾಸಕರು ತನಿಖೆಗೆ ಆದೇಶಿಸಲಿ: ನಾಗರಿಕ ಸಮಿತಿ ಆಗ್ರಹ
admincoorgdaily

ಇದಕ್ಕೆ ಎಡಿಟೆಡ್ ಸುದ್ದಿ ಸರ್:
*ವಿರಾಜಪೇಟೆ:* ಕೊಡಗಿನ ವಿರಾಜಪೇಟೆಗೆ ಕೇರಳ ರಾಜ್ಯದಿಂದ ಮಾಕುಟ್ಟ ಗೇಟ್ ಮೂಲಕ ಬರುವ ಚೆತ್ ಕಲ್ಲು ಲಾರಿಗಳಿಂದ ಕಾಂಗ್ರೆಸ್ ಮುಖಂಡರು ಹಫ್ತಾ ವಸೂಲಿ ಮಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಿತಿ ಸಂಚಾಲಕ ಡಾ. ದುರ್ಗಾ ಪ್ರಸಾದ್ ಆಗ್ರಹಿಸಿದ್ದಾರೆ.
ಪಟ್ಟಣದ ನಾಗರಿಕ ಸಮಿತಿ ಕಚೇರಿಯಲ್ಲಿ ಕರೆದಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರಾಜಪೇಟೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಏನೇ ಜನದ್ರೋಹಿ ಕೃತ್ಯ ಎಸಗಿದರೂ ತಮ್ಮನ್ನು ರಕ್ಷಿಸಲು ತಮ್ಮ ಪ್ರತಿನಿಧಿಗಳಿದ್ದಾರೆ ಎಂಬ ಅಹಂಭಾವದಿಂದ ಕೆಲ ಮುಖಂಡರ ಶಿಷ್ಯರು ಮೆರೆಯುತ್ತಿದ್ದಾರೆ. ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ವಾಹನಗಳಿಂದ ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಶಾಸಕರು ಗಮನಹರಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಹ ಸಂಚಾಲಕ ಮಾಳೇಟಿರ ಎಸ್. ಕಾಳಯ್ಯ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು, ಜನರ ತಾಳ್ಮೆ ಪರೀಕ್ಷಿಸಬಾರದು. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಬೇಕು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಮುಖಂಡರೇ ಹಫ್ತಾ ವಸೂಲಿಗೆ ಇಳಿದಿರುವುದು ಒಳ್ಳೆಯ ನಡತೆಯಲ್ಲ ಎಂದು ಹೇಳಿದರು.