ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೆಗ್ಗಳ ಶಾಲಾ ವಿದ್ಯಾರ್ಥಿಗಳ ಸಾಧನೆ
admincoorgdaily
ವಿರಾಜಪೇಟೆ;ಜೂನಿಯರ್ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶಿಸನ ನೀಡಿದ್ದಾರೆ ವಿದ್ಯಾರ್ಥಿ ವಿಭಾಗದಲ್ಲಿ ಕಬ್ಬಡಿ ದ್ವಿತೀಯ ಸ್ಥಾನ ಹಾಗೂ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದರೆ. ವಿದ್ಯಾರ್ಥಿನಿಯರ ತಂಡ ಖೋಖೋ ಆಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 200 ಮೀಟರ್ ಓಟದಲ್ಲಿ ಲೋಹಿತ್ ತೃತೀಯ , 100 ಮೀಟರ್ ಓಟದಲ್ಲಿ ಸ್ಟೆನಿಲ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸುಜಾತ , ಸಹ ಶಿಕ್ಷಕರಾದ ನಾಜಿರಾ, ಸುಮಯ , ಸಪ್ನಾ , ಗಂಗಾ ಉಪಸ್ಥಿತರಿದ್ದರು.