ಮಂಗಳೂರಿನ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಕೊಡಗಿನ ಕ್ರೀಡಾಪಟುಗಳ ಸಾಧನೆ
admincoorgdaily

ನಾಪೋಕ್ಲು :ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಗಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್–2026 ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ನಾಂಗಾಲ–ಬಿಟ್ಟಂಗಾಲ ಗ್ರಾಮದ ಚೇಮೀರ ಸೀತಮ್ಮ ಅವರು ಭಾರದ ಗುಂಡು ಎಸೆತ, ತಟ್ಟೆ ಎಸೆತ ಹಾಗೂ ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕೋಮಲಪುರ ಗ್ರಾಮದ ಆಶಾ ಅವರು ಭಾರದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತ ಹಾಗೂ ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಿಟ್ಟಂಗಾಲ ಗ್ರಾಮದ ಬಾಳುಗೋಡು ನಿವಾಸಿ ಶಾಂತಿ ಬೆಳ್ಯಪ್ಪ ಅವರು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಚೆಯ್ಯಂಡಾಣೆ–ಚೇಲಾವರ ಗ್ರಾಮದ ಪಟ್ಟಚೆರುವಂಡ ಗಗನ್ ಮೇದಪ್ಪ ಅವರು ಉದ್ದ ಜಿಗಿತ ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆದು ಕ್ರೀಡಾಪಟುಗಳು ಜಿಲ್ಲೆಗೆ ಕೀರ್ತಿತಂದಿದ್ದಾರೆ.