ವಾಣಿಜ್ಯ ಒಲಿಂಪಿಯಾಡ್ನಲ್ಲಿ ಕೆವಿಜಿ ಅಮರಜ್ಯೋತಿ ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ
admincoorgdaily

ಸುಳ್ಯ: ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಅನ್ವೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ASCA ವತಿಯಿಂದ ಆಯೋಜಿಸಲಾದ ವಾಣಿಜ್ಯ ಒಲಿಂಪಿಯಾಡ್–2026 ಪರೀಕ್ಷೆಯಲ್ಲಿ ಸುಳ್ಯದ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗದ ಒಟ್ಟು 65 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಶಮ್ಲಾ ಪ್ರಥಮ ಸ್ಥಾನ, ಪ್ರಥಮ ವಾಣಿಜ್ಯ ವಿಭಾಗದ ಜನನಿ ಕೆ. ದ್ವಿತೀಯ ಸ್ಥಾನ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಸಫಾ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಮೂವರು ವಿದ್ಯಾರ್ಥಿನಿಯರು ಮುಂದಿನ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದು, ಪರೀಕ್ಷೆಯು ಮಂಗಳೂರಿನಲ್ಲಿ ನಡೆಯಲಿದೆ.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಪರೀಕ್ಷೆಯಲ್ಲಿಯೂ ಯಶಸ್ಸು ಸಾಧಿಸಲು ಶುಭ ಹಾರೈಸಿದರು.