Kodagu

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

admincoorgdaily

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಮಡಿಕೇರಿ:-ಎಕ್ಸಲೇಟ್ ಮೂಡುಬಿದಿರೆ ಮತ್ತು ದಿ ಹಿಂದೂ ಪತ್ರಿಕೆಯ ಸಹಯೋಗದಲ್ಲಿ ನಗರದ ಮೈತ್ರಿ ಹಾಲ್‍ನಲ್ಲಿ ಜಿಲ್ಲಾ ಮಟ್ಟದ ಸೈನ್ಸ್ ಮಾಡಲ್ (ಸೈನ್ಸ್ ಫೆಸ್ಟ್ 2026) ಎಂಬ ಕಾರ್ಯಕ್ರಮ ನಡೆಯಿತು. 

   ಈ ಸೈನ್ಸ್ ಮಾಡಲ್‍ನಲ್ಲಿ ಮಡಿಕೇರಿ ಜನರಲ್ ತಿಮ್ಮಯ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್ ಜಿ.ವಿ. ಮತ್ತು ತನಯ್ ಅವರು ಭಾಗವಹಿಸಿ ಎರಡನೇ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ವಿದ್ಯಾರ್ಥಿಗಳ ಮಾರ್ಗದರ್ಶಕರಾದ ಭರತ್ ಕೋಟಿ, ಈರಪ್ಪ, ಸುಮಿತ್ರ, ಕೃತಿಕ ಮತ್ತು ರೋಸಿಣಿ ಶಿಕ್ಷಕರುಗಳ ತರಬೇತಿಯಿಂದ ಎರಡನೇ ಸ್ಥಾನ ಪಡೆದಿದ್ದಾರೆ. 
ಶಾಲೆಯ ಪ್ರಾಂಶುಪಾಲರಾದ ಕವಿತ ಮತ್ತು ಶಾಲೆಯ ಶಿಕ್ಷಕರ ವೃಂದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ.