ಆರೋಗ್ಯಪೂರಕವಾದ ಜೀವನಶೈಲಿ ರೂಡಿಸಿಕೊಳ್ಳಿ - ಡಾ. ಸುಮುಖ್ ಕರೆ: ರೋಟರಿ ವುಡ್ಸ್ ವತಿಯಿಂದ ಪೋಷಣ್ ಅಭಿಯಾನ್ - ಮಹಿಳೆಯರಿಂದ ವೈವಿಧ್ಯಮಯ ತಿನಿಸುಗಳ ತಯಾರಿ
admincoorgdaily

ಮಡಿಕೇರಿ ಸೆ.23 - ಪೌಷ್ಟಿಕಾಂಶಗಳುಳ್ಳ ಆಹಾರ ಸೇವನೆ ಮತ್ತು ಸರಳ ಜೀವನಶೈಲಿಯಿಂದ ಮಹಿಳೆಯರು ಆರೋಗ್ಯವನ್ನು ಉತ್ತಮವಾಗಿಸಲು ಸಾಧ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುತು೯ ಚಿಕಿತ್ಸಾ ವೈದ್ಯಾಧಿಕಾರಿ ಡಾ. ಎ.ಟಿ. ಸುಮುಖ್ ಹೇಳಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಮಡಿಕೇರಿ ಗೌಳಿಬೀದಿಯ ಅಂಗನವಾಡಿ ಕಾಯ೯ಕತೆ೯ಯರ ಸಹಯೋಗದೊಂದಿಗೆ ಆಯೋಜಿತ
5 ನೇ ವಷ೯ದ ಪೋಷಣ್ ಅಭಿಯಾನ್ ಗೆ ಚಾಲನೆ ನೀಡಿ ಮಾತನಾಡಿದ ಡಾ. ಸುಮುಖ್, ಮಹಿಳೆಯರು ಉತ್ತಮ ಪೌಷ್ಟಿಕಾಂಶವಿರುವ ಆಹಾರ ಸೇವನೆಯತ್ತ ಸದಾ ಗಮನ ನೀಡಬೇಕು. ಸಾಮಾನ್ಯವಾಗಿ ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಆರೋಗ್ಯ ಮತ್ತು ಆಹಾರದತ್ತ ಗಮನ ನೀಡುತ್ತಲೇ ತಮ್ಮ ವೈಯಕ್ತಿಕ ಆರೋಗ್ಯ ಮತ್ತು ಆಹಾರ ಸಂಬಂಧ ನಿಲ೯ಕ್ಷ್ಯ ತೋರುತ್ತಾರೆ. ಇದರಿಂದಾಗಿ ಆರೋಗ್ಯ ಹದಗೆಡುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಗಂಭೀರ ಗಮನ ನೀಡಿ, ಪೌಷ್ಟಿಕಾಂಶ ಇರುವ ಆಹಾರವನ್ನು ಹೊತ್ತಿಗೆ ತಪ್ಪದಂತೆ ಸೇವನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.
50 ವಷ೯ ದಾಟಿದ ಮಹಿಳೆಯರು ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಕ್ಯಾನ್ಸರ್ ತಪಾಸಣೆಯನ್ನೂ ಮಹಿಳೆಯರು ಮಾಡಿಸಿಕೊಳ್ಳುವುದು ಉತ್ತಮ, ಜಿಲ್ಲಾ ಸಕಾ೯ರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಆರೋಗ್ಯ ಸಂಬಂಧಿತ ಅನೇಕ ತಪಾಸಣೆ ಮತ್ತು ಚಿಕಿತ್ಸೆಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಮಾಡಿಕೊಳ್ಳಿ ಎಂದು ಕರೆ ನೀಡಿದರು. ಸ್ನನ ಕ್ಯಾನ್ಸರ್ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಮಹಿಳೆಯರು ಪ್ರಾಥಮಿಕ ತಪಾಸಣೆ ಮಾಡಿಸಿಕೊಂಡಾಗ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ನಿವಾರಿಸಬಹುದು ಎಂದರು. ಅನಗತ್ಯವಾಗಿ ಮಹಿಳೆಯರು ಸಿಕ್ಕಸಿಕ್ಕ ಮಾತ್ರೆಗಳನ್ನು ಸೇವಿಸದೇ ವೈದ್ಯರಿಂದ ಸೂಕ್ತ ತಪಾಸಣೆ ಬಳಿಕವೇ ವೈದ್ಯರ ಮಾಗ೯ದಶ೯ನದಲ್ಲಿಯೇ ಔಷಧಿ ಸೇವಿಸುವುದರಿಂದ ಆರೋಗ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಾಧ್ಯವಿದೆ ಎಂದೂ ಡಾ.ಸುಮುಖ್ ಹೇಳಿದರು.
ರೋಟರಿ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ. ಮಾತನಾಡಿ, ಕೇಂದ್ರ ಸಕಾ೯ರದ ಮಹತ್ವದ ಆರೋಗ್ಯ ಆಹಾರ ಯೋಜನೆಯಾಗಿರುವ ಪೋಷಣ್ ಅಭಿಯಾನವು ದೇಶವ್ಯಾಪಿ 14 ಲಕ್ಷ ಅಂಗನವಾಡಿಗಳಲ್ಲಿ ಜಾರಿಯಲ್ಲಿದೆ. ಈ ಯೋಜನೆ ಮೂಲಕ ಅಂಗನವಾಡಿಯ ಪುಟಾಣಿಗಳಿಗೆ ಪೌಷ್ಟಿಕ ಆಹಾರ ವಿತರಣೆಯ ಮಹತ್ವದ ಉದ್ದೇಶ ಹೊಂದಲಾಗಿದೆ ಎಂದರು. ರೋಟರಿ ವುಡ್ಸ್ ಸಂಸ್ಥೆಯು ಪೋಷಣ್ ಅಭಿಯಾನವನ್ನು 5 ವಷ೯ಗಳಿಂದ ಯಶಸ್ವಿಯಾಗಿ ಜಾರಿಗೊಳಿಶುತ್ತಿರುವುದು ಶ್ಲಾಘನೀಯವಾಗಿದ್ದು, ರೋಟರಿ ಸಂಸ್ಥೆಯು ಸಾವ೯ಜನಿಕರ ಉತ್ತಮ ಆರೋಗ್ಯಕ್ಕಾಗಿ ವಿವಿಧ ಕಾಯ೯ಯೋಜನೆಗಳನ್ನು ಹೊಂದಿದೆ ಎಂದರು.
ರೋಟರಿ ನಿದೇ೯ಶಕ ಬಿ.ಜಿ. ಅನಂತಶಯನ ಮಾತನಾಡಿ, ಪುರಾತನ ಕಾಲದ ಆಹಾರ ಪದ್ದತಿಯು ಆರೋಗ್ಯದತ್ತ ಕೇಂದ್ರೀಕೖತವಾಗಿತ್ತು, ಪೌಷ್ಟಿಕಾಂಶಗಳನ್ನು ಹೊಂದಿದ್ದ ಅಂದಿನ ಆಹಾರ ಸೇವನೆಯಿಂದಾಗಿ ಇಂದಿನಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರಲಿಲ್ಲ. ಪೌಷ್ಟಿಕಾಂಶಭರಿತ ಆಹಾರ ಕ್ರಮದ ಬಗ್ಗೆ ಹೆಚ್ಚಿನ ಜಾಗ್ರತಿ ಮೂಡಬೇಕು ಎಂದರು. ಪ್ರತೀನಿತ್ಯವೂ ಪೌಷ್ಟಿಕಾಂಶಭರಿತ ಆಹಾರ ಸೇವಿಸಿದ್ದೇ ಆದಲ್ಲಿ ಆರೋಗ್ಯ ಸಮಸ್ಯೆ ಖಂಡಿತಾ ಬರುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಮಾತನಾಡಿ, ಅಂಗನವಾಡಿ ಕಾಯ೯ಕತೆ೯ಯರಿಗೆ ಪೌಷ್ಟಿಕಾಂಶಭರಿತ ಆಹಾರದ ಬಗ್ಗೆ ಜಾಗ್ರತಿ ಮೂಡಿಸಲು ಈ ಕಾಯ೯ಕ್ರಮವನ್ನು ಪ್ರತೀ ವಷ೯ ರೋಟರಿ ವುಡ್ಸ್ ವತಿಯಿಂದ ಆಯೋಜಿಸುತ್ತಾ ಬರಲಾಗಿದೆ. ಪ್ರತೀ ವಷ೯ವೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೌಷ್ಟಿಕಾಂಶಭರಿತ ಆಹಾರ ತಯಾರಿಸಿ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ರೋಟರಿ ವುಡ್ಸ್ ಕಾಯ೯ದಶಿ೯ ಸ್ಮಿತಾ ಚಂಗಪ್ಪ ವಂದಿಸಿದರು. ಕಾಯ೯ಕ್ರಮದಲ್ಲಿ ಗೌಳಿಬೀದಿ ಅಂಗನವಾಡಿಯ ಕಾಯ೯ಕತೆ೯ಯರು ಮತ್ತು ಮಡಿಕೇರಿ ನಗರದ ವಿವಿಧೆಡೆಗಳ ಮಹಿಳೆಯರು ವೈವಿಧ್ಯಮಯ ಆಹಾರವನ್ನು ಪ್ರದಶಿ೯ಸಿದ್ದರು. ಪೌಷ್ಟಿಕಾಂಶಭರಿತ ಆಹಾರ ತಯಾರಿಕಾ ಸ್ಪಧ೯ಯಲ್ಲಿ ಪುಪ್ಪ (ಬೀಟ್ ರೂಟ್ ದೋಸೆ) ಪ್ರಥಮ ಶಿಬಾ (ಸೌತೆಕಾಯಿ ಸ್ಯಾಂಡ್ ವಿಚ್ ) ದ್ವಿತೀಯ ಮತ್ತು ಸಂಧ್ಯಾ (ಮೆಂತೆ ಗಂಜಿ) ತೖತೀಯ ಬಹುಮಾನ ಪಡೆದರು. ಗೌಳಿಬೀದಿ ಅಂಗನವಾಡಿಯ ಶಿಕ್ಷಕಿ ಗೀತಾ, ರೋಟರಿ ವುಡ್ಸ್ ಸ್ಥಾಪಕಾಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಕಿರಣ್ ಕುಂದರ್ ಸೇರಿದಂತೆ ರೋಟರಿ ಸದಸ್ಯರು ಹಾಜರಿದ್ದರು.