ಸ್ವಯಂ ಸೇವೆ ವಿದ್ಯಾರ್ಥಿ ಜೀವನಕ್ಕೆ ಮಾತ್ರವಲ್ಲ, ಜೀವನಪೂರ್ತಿ ಅಳವಡಿಸಿಕೊಳ್ಳಿ ;ಮಾರ್ಚಂಡ ಗಣೇಶ್ ಪೊನ್ನಪ್ಪ ಕರೆ
admincoorgdaily

ವಿರಾಜಪೇಟೆ;ಸ್ವಯಂ ಸೇವೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು. ವಿದ್ಯಾರ್ಥಿಗಳಿಗೆ ಸಮಾನತೆ, ನೈರ್ಮಲ್ಯತೆ, ನಾಯಕತ್ವ ಗುಣ, ಶಿಸ್ತು, ಸಮಯದ ಸದ್ಬಳಕೆ ಮುಂತಾದ ವಿಚಾರಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎನ್.ಎಸ್.ಎಸ್ , ಯೂತ್ ರೆಡ್ ಕ್ರಾಸ್ ಉತ್ತಮ ವೇದಿಕೆ ಎಂದು ಕೊಡಗು ಎಜುಕೇಶನಲ್ ಮತ್ತು ಸೋಶಿಯಲ್ ಟ್ರಸ್ಟ್ ನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಬುಧವಾರ ನಡೆದ ಎನ್ಎಸ್ಎಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ನಾಯಕರಿಗೆ ಬ್ಯಾಡ್ಜ ವಿತರಿಸಿ ಸ್ವಯಂಸೇವಕರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಎನ್ ಎಸ್ ಎಸ್ ಎಂಬುವುದು ಗಾಂಧೀಜಿಯವರ ನೂರನೆಯ ಜನ್ಮದಿನದ ಸವಿನೆನಪಿಗಾಗಿ ಆರಂಭಿಸಿದಂತಹ ಸ್ವಯಂಸೇವಾ ಘಟಕ. ಇಂದು ಹೆಮ್ಮರವಾಗಿ ಬೆಳೆದು ಎಲ್ಲಾ ಕಾಲೇಜುಗಳನ್ನು ತನ್ನ ಘಟಕವನ್ನು ಆರಂಭಿಸಿದೆ. ನನಗಲ್ಲ ನಿನಗೆ ಎಂಬ ಧೇಯವಾಕ್ಯದಂತೆ ಸಮಾಜದಲ್ಲಿ ಸರ್ವರು ಸ್ವಾರ್ಥವನ್ನು ತೊರೆದು ಸಮಾನತೆ, ಸೌಹಾರ್ದತೆ, ಪರಸ್ಪರ ಸಹಕಾರದಿಂದ ಒಗ್ಗೂಡಬೇಕು . ಪರಿಸರ ಕಾಳಜಿ, ನೈರ್ಮಲ್ಯತೆಯನ್ನು ಅಳವಡಿಸಿಕೊಂಡು ಇತರರಿಗೂ ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯ ಸ್ವಯಂ ಸೇವಕರಿಂದಾಗ ಬೇಕು. ಸ್ವಯಂ ಸೇವೆ ಎಂಬುದು ಕೇವಲ ವಿಧ್ಯಾರ್ಥಿ ಜೀವನಕ್ಕೆ ಮಿಸಲಿರದೆ ನಿಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಬೇಕು . ಸಮಾಜದ ಏಳಿಗೆಗೆ ಸದಾ ಸಿದ್ದರಾಗಿ ಮಾನಸಿಕ, ದೈಹಿಕವಾದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಮಾತನಾಡಿ ಸ್ವಚ್ಚತೆ ಎಂಬುದು ನಮ್ಮ ಮನೆಗಳಿಗೆ ಮಾತ್ರ ಸೀಮಿತವಲ್ಲ . ನಮ್ಮ ಸುತ್ತಲಿನ ಪರಿಸರ , ಸಮಾಜವನ್ನು ಸ್ವಚ್ಛವಾಗಿರುವಂತೆ ಮಾಡುವ ಕೆಲಸ ಸ್ವಯಂ ಸೇವಕರಿಂದಾಗ ಬೇಕು. ಸಮಾಜದಲ್ಲಿ ನೈರ್ಮಲ್ಯ , ಪೌಷ್ಠಿಕ ಆಹಾರದ ಮಹತ್ವ , ಪರಿಸರ ರಕ್ಷಣೆಯಂತಹ ವಿಚಾರದ ಬಗ್ಗೆ ಅರಿವು ಮೂಡಿಸುವ ಜವಬ್ದಾರಿ ಎನ್.ಎಸ್.ಎಸ್.ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಮೇಲಿದೆ . ಅದೆರೀತಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲೂ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯರಾಗಬೇಕು ಎಂದರು ಈ ಸಂದರ್ಭದಲ್ಲಿ ವಿರಾಜಪೇಟೆ ಪುರಸಭೆಯ ಹಿರಿಯ ಪೌರ ಕಾರ್ಮಿಕರಾದ ಹೆಚ್.ಎಂ .ಸುಬ್ರಮಣಿ ಹಾಗೂ ಹೆಚ್.ಜಿ. ಶಂಕ್ರಮ್ಮ ರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಮೇಲೆ ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ಸೋಮಣ್ಣ, ಎನ್.ಎಸ್.ಎಸ್. ಸಮಿತಿ ಸದಸ್ಯರಾದ ಪವಿತ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್
ಸಮಿತಿ ಸದಸ್ಯರಾದ ಮಾಣಿಕ್ಯ, ಲೋಚನ , ಉಪನ್ಯಾಸಕರಾದ ಅಕ್ಷಿತಾ ನಾಯ್ಕ್ , ವನಿತ ಎನ್.ಎಸ್. ಎಸ್ ಸ್ವಯಂಸೇವಕರು ಹಾಜರಿದ್ದರು.