Kodagu

ಹುದಿಕೇರಿಯಲ್ಲಿ ₹4 ಲಕ್ಷ ವೆಚ್ಚದ ಐನ್ ಮನೆ ರಸ್ತೆ ಉದ್ಘಾಟನೆ

admincoorgdaily

ಹುದಿಕೇರಿಯಲ್ಲಿ ₹4 ಲಕ್ಷ ವೆಚ್ಚದ  ಐನ್ ಮನೆ ರಸ್ತೆ ಉದ್ಘಾಟನೆ
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಹುದಿಕೇರಿ ಭಾಗದ ಐಪುಮಾಡ ಐನ್ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟನೆ ಮಾಡಲಾಯಿತು.

ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ರೂ. 4 ಲಕ್ಷ ಅನುದಾನದಲ್ಲಿ ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಐಪುಮಾಡ ಕುಟುಂಬಸ್ಥರು ಮಾನ್ಯ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ಚಂಗುಲಂಡ ಸೂರಜ್, ಐಪುಮಾಡ ಕುಟುಂಬದ ಹಿರಿಯರಾದ ಐಪುಮಾಡ ನಂಜಪ್ಪ, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸದಸ್ಯರಾದ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಪಕ್ಷದ ಹಿರಿಯ ಮುಖಂಡರಾದ ಚೆಕ್ಕೇರ ವಾಸು ಕುಟ್ಟಪ್ಪ, ಸುಧೀರ್, ಮುಖಂಡರುಗಳಾದ ಅಜ್ಜಿಕುಟ್ಟಿರ ಪಮ್ಮು, ನೂರೇರ ರಮೇಶ್, ಮನೋಹರ್, ಐಪುಮಾಡ ರೋನಿ, ಅಪ್ಪಚಂಗಡ ಮೋಟಯ್ಯ, ಹುದಿಕೇರಿ ಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರು ರೀಕ್ಷಿತ್ ಕಾರ್ಯಪ್ಪ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.