ನಾಳೆ ಎ.ಐ.ಟಿ.ಯು.ಸಿ ಜಿಲ್ಲಾ ಸಮ್ಮೇಳನ
admincoorgdaily

ಸಿದ್ದಾಪುರ: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ಮೊದಲ ಕೊಡಗು ಜಿಲ್ಲಾ ಸಮ್ಮೇಳನವು ಅ.25 ರಂದು ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಕಾಫಿ ನಾಡು ಕಟ್ಟಡ ಕಾರ್ಮಿಕ ಸಂಘಟನೆ, ಪ್ಲಾಂಟೇಷನ್, ಕೆ.ಎಸ್.ಆರ್.ಟಿ.ಸಿ, ಹಾಗೂ ಎಸ್.ಎಲ್.ಎನ್ ಕೈಗಾರಿಕಾ ಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಲಿದ್ದು, ನೂತನ ಜಿಲ್ಲಾ ಸಮಿತಿ ರಚನೆ ಮಾಡಲಿದ್ದಾರೆ ಎಂದು ಪ್ಲಾಂಟೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮ ರಾಜ್ ತಿಳಿಸಿದ್ದಾರೆ.