ಅಜ್ಜಿಕುಟ್ಟಿರ ಹಾಕಿ ನಮ್ಮೆ-2027 ಪೂರ್ವಭಾವಿ ಸಭೆ
admincoorgdaily

ವಿರಾಜಪೇಟೆ:ಮುಂಬರುವ ಸಾಲಿನಲ್ಲಿ ಆಯೋಜನೆಗೊಳ್ಳಲಿರುವ ಅಜ್ಜಿಕುಟ್ಟಿರ ಹಾಕಿ ನಮ್ಮೆ-2027 ಟೂರ್ನಿಯ ಪೂರ್ವಭಾವಿ ಸಭೆ ಶಾಸಕರ ಗೃಹ ಕಚೇರಿಯಲ್ಲಿ ಇಂದು ನಡೆಯಿತು.
ಕೊಡವ ಕುಟುಂಬಗಳ ಪ್ರತಿಷ್ಠಿತ ಹಾಕಿ ಪಂದ್ಯಾವಳಿ ಇದಾಗಿದ್ದು, ವಾರ್ಷಿಕವಾಗಿ ನಡೆಯುವ ಈ ಕ್ರೀಡಾಕೂಟದ 2027ನೇ ಸಾಲಿನ ಪ್ರಾಯೋಜಕತ್ವವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಮನೆತನವಾದ ಅಜ್ಜಿಕುಟ್ಟಿರ ಕುಟುಂಬ ವಹಿಸಿಕೊಂಡಿರುವುದು ವಿಶೇಷ.
ಸಭೆಯಲ್ಲಿ ಹಾಕಿ ಪಂದ್ಯಾವಳಿಯ ರೂಪುರೇಷೆ, ಕಾರ್ಯಕ್ರಮಗಳ ಆಯೋಜನೆ ಹಾಗೂ ಯಶಸ್ವಿ ನಿರ್ವಹಣೆ ಕುರಿತು ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೈದಾನ ಸಜ್ಜುಗೊಳಿಸುವಿಕೆ, ವಿವಿಧ ಸಮಿತಿಗಳ ಜವಾಬ್ದಾರಿ ಮತ್ತು ಉಸ್ತುವಾರಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಹಾಕಿ ನಮ್ಮೆ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ನರೇನ್ ಕಾರ್ಯಪ್ಪ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.