Kodagu

ಹಾಕತ್ತೂರಿನಲ್ಲಿ ಅ.19ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ ಸಮಾವೇಶ

admincoorgdaily

ಹಾಕತ್ತೂರಿನಲ್ಲಿ ಅ.19ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ ಸಮಾವೇಶ
ನಾಪೋಕ್ಲು :‘ಪ್ರಕಾಶಮಾನ 100 ವರ್ಷಗಳು’ ಎಂಬ ಘೋಷವಾಕ್ಯದೊಂದಿಗೆ ಸಮಸ್ತ ಸೆಂಟಿನರಿ ಆಚರಣೆಯ ಸಮಾರೋಪ ಸಮಾರಂಭವು 2027ರ ಜನವರಿ 28ರಿಂದ 31ರವರೆಗೆ ಕೇರಳದ ಮಲಪ್ಪುರಂ ಜಿಲ್ಲೆಯ ವಾದಿ ಹರಮೈನಿಯಲ್ಲಿ ನಡೆಯಲಿದೆ.

ಇದರ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಭಾಗವಾಗಿ ಕೊಡಗು ಜಿಲ್ಲಾ ಸಮಸ್ತ ಸೆಂಟಿನರಿ ಅಸೆಂಬ್ಲಿಯನ್ನು ಅಕ್ಟೋಬರ್ 19ರಂದು ಹಾಕತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಕೊಡಗು ಜಿಲ್ಲಾ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ನೇತೃತ್ವದಲ್ಲಿ ಹಾಕತ್ತೂರು ಮುಸ್ಲಿಂ ಜಮಾಅತ್ ಅಧೀನದ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಈ ಸಮಾವೇಶವು ಕೂರ್ಗ್ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸಿ ಕಿಲ್ಲೂರು ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೂರ್ಗ್ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವಿರಾಜಪೇಟೆ, ಕೊಡಗು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಎಮ್ಮೆಮಾಡು,ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಅಧ್ಯಕ್ಷ ಪಿ.ಎಂ.ಲತೀಫ್ ಸುಂಟಿಕೊಪ್ಪ,ಎಸ್‌ವೈಎಸ್ ಜಿಲ್ಲಾ ಅಧ್ಯಕ್ಷ ಮುನೀರ್ ಮಹ್ಳರಿ ಪಡಿಯಾಣಿ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ಎಮ್ಮೆಮಾಡು, ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ ಹಾಗೂ ಎಸ್ಎಸ್ಎಫ್ ಜಿಲ್ಲಾ ಅಧ್ಯಕ್ಷ ಕಮರುದ್ದೀನ್ ಸಖಾಫಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕೇರಳದ ಪ್ರಮುಖ ವಾಗ್ಮಿ ಸುಲೈಮಾನ್ ಸಖಾಫಿ ಮಾಳಿಯೇಕಲ್ ಅವರು ವಿಶೇಷ ತರಗತಿ ನಡೆಸಿಕೊಡಲಿದ್ದಾರೆ. ಜಿಲ್ಲೆಯ ಉಲಮಾ ಹಾಗೂ ಉಮರಾ ನಾಯಕರು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್,ಎಸ್‌ವೈಎಸ್, ಎಸ್‌ಎಸ್‌ಎಫ್, ಜಂಇಯ್ಯತ್ತುಲ್ ಉಲಮಾ, ಜಂಇಯ್ಯತ್ತುಲ್ ಮುಅಲ್ಲಿಮೀನ್, ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಹಾಗೂ ಸುನ್ನೀ ಸಂಯುಕ್ತ ಜಮಾಅತ್ ಸೇರಿದಂತೆ ವಿವಿಧ ಸಂಘಟನೆಗಳ 300 ಆಯ್ದ ಕಾರ್ಯಕರ್ತರು ಶಿಬಿರಾರ್ಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಸ್ತದ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಅಸೆಂಬ್ಲಿಯು ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಬಲಪಡಿಸುವುದು ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದೆ ಎಂದು ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಜಿಲ್ಲಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಕೊಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.