ಗೋಣಿಕೊಪ್ಪದಲ್ಲಿ ಸಮಸ್ತ ಪ್ರಾರ್ಥನಾ ದಿನಾಚರಣೆ
admincoorgdaily

ಗೋಣಿಕೊಪ್ಪ: ನೂರುಲ್ ಹುದಾ ಮದರಸ ಗೋಣಿಕೊಪ್ಪ (NHM) ಆವರಣದಲ್ಲಿ ಬೆಳಿಗ್ಗೆ 7 ಗಂಟೆಗೆ ಸಮಸ್ತ ಪ್ರಾರ್ಥನಾ ದಿನಾಚರಣೆಯನ್ನು ಮಹಲ್ ಅಧ್ಯಕ್ಷ ಅಬ್ದುಲ್ ನಾಸರ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
NHM ಪ್ರಾಂಶುಪಾಲ ರಿಯಾಜ್ ಬಾಖವಿ ಸ್ವಾಗತ ಕೋರಿದರು. ಸಮಸ್ತ ನಡೆದು ಬಂದ ದಾರಿ ಮತ್ತು ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿ ಸಭೆಯನ್ನು ಮಹಲ್ ಖತೀಬ್ ಮುಹಮ್ಮದ್ ಅಲಿ ಫೈಝಿ ಅವರು ಉದ್ಘಾಟನಾ ಭಾಷಣ ಮಾಡಿದರು.
ಮಹಲ್ ಕಾರ್ಯದರ್ಶಿ ಅಬ್ದುಲ್ ಸಮದ್, ಮದರಸ ಕನ್ವೀನರ್ ಸಲಾಂ, ಜಮಾಅತ್ ಉಪಾಧ್ಯಕ್ಷ ರಷೀದ್ ಅವರು ಭಾಷಣ ಮಾಡಿದರು.
ಸಭೆಯಲ್ಲಿ ಖಾದರ್ ಮುಸ್ಲಿಯಾರ್, MC ಅಶ್ರಫ್ ಮುಸ್ಲಿಯಾರ್, ಮಜೀದ್ ಬಾಖವಿ, ಗಫೂರ್ ಬಾಖವಿ, ಶಫೀಕ್ ದಾರಿಮಿ, ಮುಜೀಬ್ ಅಜ್ಹರಿ, ಅಜೀಜ್ ಬಾಖವಿ, SKSBV ಕಾರ್ಯಕರ್ತರು, ಮದರಸ ವಿದ್ಯಾರ್ಥಿಗಳು ಹಾಜರಿದ್ದರು.
ಕೊನೆಯಲ್ಲಿ ನಮ್ಮನ್ನಗಲಿದ ಸಮಸ್ತ ನೇತಾರರು ಹಾಗೂ ಪೂರ್ವಿಕ ಉಲಮಾ-ಉಮರಾ ಅವರ ಹೆಸರಿನಲ್ಲಿ ಕುರಾನ್ ಪಠಿಸಿ, ಸಮಸ್ತ ಮುದರಿಸ್ ಮುಹಮ್ಮದ್ ಅಲಿ ಫೈಝಿ ಅವರು ದುವಾ ಮಜ್ಲಿಸ್ ಗೆ ನೇತೃತ್ವ ನೀಡಿದರು. ಸಹದ್ ಫೈಝಿ ವಂದಿಸಿ ಕಾರ್ಯಕ್ರಮ ಕೊನೆಗೊಳಿಸಿದರು.