ಗೋವಾದಲ್ಲಿ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್; ಕರ್ನಾಟಕ ತಂಡಕ್ಕೆ ಕೊಡಗಿನ ಮೂವರು!
admincoorgdaily

ಮಡಿಕೇರಿ: 17-11-2026 ರಿಂದ 24-11-2026 ರವರೆಗೆ ಗೋವಾದಲ್ಲಿ ನಡೆಯಲಿರುವ 2026-27ನೇ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಸ್ಪರ್ಧೆಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೊಡಗು ಜಿಲ್ಲೆಯ ಮೂವರು ಸರ್ಕಾರಿ ನೌಕರರು ಆಯ್ಕೆಯಾಗಿದ್ದಾರೆ.
ಪೊನ್ನಚ್ಚನ ಶ್ರೀನಿವಾಸ್- ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮಡಿಕೇರಿ.
ಅಶ್ವತ್.ಬಿ.ಎಲ್ - ಸಹ ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಮ್ಮತ್ತಿ.
ಅರುಣ್ ಕುಮಾರ್.ಎನ್ ಪ್ರಥಮ ದರ್ಜೆ ಸಹಾಯಕರು, ಪಿ.ಡಬ್ಲ್ಯೂ.ಡಿ ಇಲಾಖೆ ಮಡಿಕೇರಿ - ಇವರು ರಾಜ್ಯ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.