ಅಹಿಂದ ಒಕ್ಕೂಟದ ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿ ಅಮೀನಾ ಎಂ.ಎಂ. ನೇಮಕ
admincoorgdaily

ಗೋಣಿಕೊಪ್ಪಲು: ಕರ್ನಾಟಕ ಅಲ್ಪಸಂಖ್ಯಾತರ, ಹಿಂದುಳಿದವರ ಹಾಗೂ ದಲಿತರ ಒಕ್ಕೂಟದ (ಅಹಿಂದ) ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿ ಅಮೀನಾ ಎಂ.ಎಂ. ಅವರನ್ನು ನೇಮಕ ಮಾಡಲಾಗಿದೆ.
ಅಹಿಂದ ಒಕ್ಕೂಟದ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಂ. ಕರಡಿಕೊಪ್ಪ ಹಾಗೂ ಪ್ರಭಾರ ಪ್ರಧಾನ ಕಾರ್ಯದರ್ಶಿ ವಿಠ್ಠಲ ಸಣ್ಣಸಿದ್ದಪ್ಪ ಖಾನಟ್ಟಿ ಅವರು ನೇಮಕಾತಿ ಪತ್ರವನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸಮಿತಿಯ ಮುಂದಿನ ಆದೇಶದವರೆಗೆ ಈ ನೇಮಕಾತಿ ಜಾರಿಯಲ್ಲಿರುತ್ತದೆ.