Kodagu

ಆನೆಕಾಡು ದುರಂತ: ಮೃತರ ಕುಟುಂಬಕ್ಕೆ ಶಾಸಕ ಮಂತರ್ ಗೌಡ ಸಾಂತ್ವನ, ಗಾಯಾಳುಗಳ ಆರೋಗ್ಯ ವಿಚಾರಣೆ

admincoorgdaily

ಆನೆಕಾಡು ದುರಂತ: ಮೃತರ ಕುಟುಂಬಕ್ಕೆ ಶಾಸಕ ಮಂತರ್ ಗೌಡ ಸಾಂತ್ವನ, ಗಾಯಾಳುಗಳ ಆರೋಗ್ಯ ವಿಚಾರಣೆ
ಕುಶಾಲನಗರ;ಇತ್ತೀಚೆಗೆ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಹೊಸಕೋಟೆಯ ರತನ್ ಉನ್ನಿ ಹಾಗೂ ಆದರ್ಶ ಅವರ ಮನೆಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಮಂಗಳವಾರ ಭೇಟಿ ನೀಡಿ, ದುಃಖದಲ್ಲಿರುವ ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

      ಕುಟುಂಬದವರ ಮುಂದಿನ ಜೀವನೋಪಾಯಕ್ಕೆ ಅಗತ್ಯವಿರುವ ನೆರವು ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದರು.

     ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವವರ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದ ಶಾಸಕರು ವೈದ್ಯಕೀಯ ವರದಿ ಪರಿಶೀಲಿಸಿ, ಅಗತ್ಯ ವೈದ್ಯಕೀಯ ನೆರವಿನ ಕುರಿತು ಮಾಹಿತಿ ಪಡೆದರು. ಶೀಘ್ರ ಗುಣಮುಖರಾಗುವಂತೆ ಹಾರೈಸಿ, ಕುಟುಂಬದವರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಧೈರ್ಯ ತುಂಬಿದರು.