ಡಿಸೆಂಬರ್ 24ರಿಂದ ಅಂಜಿಗೇರಿ ನಾಡ್ ಹಾಕಿ ನಮ್ಮೆ; ಕೊಡವ ಕುಟುಂಬಗಳ ನಡುವಿನ 7ಎ ಸೈಡ್ ಹಾಕಿ ಪಂದ್ಯಾವಳಿ
admincoorgdaily

ಪೊನ್ನಂಪೇಟೆ: ಕೊಡವ ಕುಟುಂಬಗಳ ನಡುವೆ ಕ್ರೀಡಾ ಸೌಹಾರ್ದ, ಒಗ್ಗಟ್ಟು ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಹುದಿಕೇರಿಯ ಅಂಜಿಗೇರಿ ನಾಡ್ ವತಿಯಿಂದ ಡಿಸೆಂಬರ್ 24ರಿಂದ ಇಲ್ಲಿನ ಜನತಾ ಪ್ರೌಢಶಾಲೆಯ ಮೈದಾನದಲ್ಲಿ ಹಾಕಿ ನಮ್ಮೆಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ಕೊಡವ ಕುಟುಂಬಗಳ ತಂಡಗಳು ಭಾಗವಹಿಸಲಿದ್ದು, 7 ಎ ಸೈಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡದಲ್ಲಿ ಮೈದಾನದಲ್ಲಿ ಏಳು ಆಟಗಾರರು ಹಾಗೂ ಹೆಚ್ಚುವರಿಯಾಗಿ ಮೂವರು ಆಟಗಾರರು ಸೇರಿದಂತೆ ಒಟ್ಟು 10 ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಲು ಮೊದಲ 100 ತಂಡಗಳಿಗೆ ಮಾತ್ರ ನೋಂದಣಿಗೆ ಅವಕಾಶವಿದ್ದು, ಆಸಕ್ತ ತಂಡಗಳು ನವೆಂಬರ್ 15ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ತಂಡಕ್ಕೆ ರೂ 2,500 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ತಂಡಗಳ ನೋಂದಣಿಗೆ ಚೆಕ್ಕೇರ ಆದರ್ಶ್ ಮೊ. 8105407337 ಮತ್ತು ಚಂಗುಲಂಡ ಅಯ್ಯಪ್ಪ ಮೊ. 934402377 ಅವರನ್ನು ಸಂಪರ್ಕಿಸಬಹುದು ಆಯೋಜಕರು ತಿಳಿಸಿದ್ದಾರೆ.