ಸೆ.20ಕ್ಕೆ ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
admincoorgdaily

ಸಂಪಾಜೆ: ಮಡಿಕೇರಿ ತಾಲೂಕು ಸಂಪಾಜೆ ಚಾಡವು-ಮಂಗಳಪಾರೆ ತೆರಳುವ ರಸ್ತೆಯ ಸುರಕ್ಷತೆಗಾಗಿ ರೂ. 10 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆ ಕಾಮಗಾರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಅಲಿ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕನ್ಯಾನ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಮುಖಂಡರುಗಳಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಸುರೇಶ್ ಸಂಪಾಜೆ, ಹನೀಫ್ ಎಸ್.ಪಿ, ಜಾಫರ್, ರಿತಿನ್, ಮೈದು ಕುನ್ನಿ, ಮುಸ್ತು ಗುಂಜಲ, ಚೆನಿಯಪ್ಪ ಕುದುರೆಪಾಯ, ಚೆನ್ನಪ್ಪ ಕುದುರೆಪಾಯ, ರವಿರಾಜ್ ಹೊಸೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.