ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವಾಷಿ೯ಕ ಮಹಾಸಭೆ; ಕೊಡಗು ಪ್ರವಾಸೋದ್ಯಮ ಸಂಬಂಧಿತ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ; ಸಚಿವ ಸತೀಶ್ ಜಾರಕಿಹೊಳಿ
admincoorgdaily

ಮಡಿಕೇರಿ ಅ.31- ಕೊಡಗು ಪ್ರವಾಸೋದ್ಯಮ ಅಭಿವೖದ್ದಿ ಸಂಬಂಧಿತ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗುತ್ತದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರಕಟಿಸಿದ್ದು, ಕೊಡಗಿನ ಪ್ರವಾಸಿ ತಾಣಗಳಿಗೆ ತೆರಳುವ 5 ಕಿ.ಮೀ.ಯೊಳಗಿನ ಗ್ರಾಮೀಣ ರಸ್ತೆಗಳನ್ನು ಶೀಘ್ರಗತಿಯಲ್ಲಿ ಅಭಿವೖದ್ದಿ ಪಡಿಸಲಾಗುತ್ತದೆ ಎಂದೂ ಘೋಷಿಸಿದ್ದಾರೆ.
ನಗರದ ಹೊರವಲಯದಲ್ಲಿನ ಕೂಗ್೯ ವೈಲ್ಡರ್ ನೆಸ್ ರೆಸಾಟ್೯ನಲ್ಲಿ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ನ ವಾಷಿ೯ಕ ಮಹಾಸಭೆ ಹಿನ್ನಲೆಯಲ್ಲಿ ಆಯೋಜಿತ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಡಮೆ ಸೌಕಯ೯ಗಳ ನಡುವೇ ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಗಮನ ಸೆಳೆದಿದೆ. ಪ್ರವಾಸೋದ್ಯಮಕ್ಕೆ ಬಹಳ ಮುಖ್ಯವಾಗಿರುವ ರಸ್ತೆಗಳ ಅಭಿವೖದ್ದಿಗೆ ತಾನು ಎಲ್ಲಾ ರೀತಿಯಲ್ಲಿಯೂ ಸಹಾಯ ನೀಡುವುದಾಗಿಯೂ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಚಿವರ ಸಭೆ ನಡೆಸಿ ಕೊಡಗು ಪ್ರವಾಸೋದ್ಯಮದ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ ಸಚಿವರು, ಕೊಡಗಿನ ಗ್ರಾಮೀಣ ಭಾಗದಲ್ಲಿರುವ 5 ಕಿ.ಮೀ.ಯೊಳಗಿನ ಪ್ರವಾಸಿ ತಾಣಗಳಿಗೆ ಸಂಪಕ೯ ಕಲ್ಪಿಸುವ ರಸ್ತೆಗಳ ಅಭಿವೖದ್ದಿಗೆ ತುತು೯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ತರಬೇತಿ ಕೇಂದ್ರ ಸ್ಥಾಪನೆ, ಅಂತರರಾಜ್ಯ ಸಂಪಕ೯ ರಸ್ತೆಗಳ ಅಭಿವೖದ್ದಿ, ಮಿನಿ ವಿಮಾನನಿಲ್ದಾಣ ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ತಾನು ಗಂಭೀರವಾಗಿ ಗಮನ ನೀಡುವುದಾಗಿಯೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 20 ವಷ೯ಗಳ ಳಳಿಕ ರಾಜ್ಯ ಸಕಾ೯ರದಿಂದ ಮೂರೂವರೆ ವಷ೯ಗಳಲ್ಲಿ 4 ಸಾವಿರ ಸೇತುವೆಗಳನ್ನು ರಾಜ್ಯವ್ಯಾಪಿ ನಿಮಿ೯ಸಲಾಗಿದೆ ಎಂದು ಹೇಳಿದ ಸಚಿವರು, ಕಳೆದ ಹಲವಾರು ವಷ೯ಗಳಿಂದ ರಾಜ್ಯ ಸಕಾ೯ರಗಳು ಮುಂಗಡ ಪತ್ರದಲ್ಲಿ ಲೋಕೋಪಯೋಗಿ ಇಲಾಖೆಗೆ ನೀಡುತ್ತಿರುವ 10 ಸಾವಿರ ಕೋಟಿ ರು. ವಾಷಿ೯ಕ ಅನುದಾನವನ್ನು ಹೆಚ್ಚು ಮಾಡಲೇ ಇಲ್ಲ ಎಂದು ವಿಷಾಧಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾಯ೯ದಶಿ೯, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಪ್ರವಾಸೋದ್ಯಮ ದೖಷ್ಟಿಯಿಂದ ಕೊಡಗನ್ನು ನಿಲ೯ಕ್ಷಿಸಲಾಗುವುದಿಲ್ಲ. ಕೊಡಗಿನ ನೈಜ ಸೌಂದಯ೯ ಸಂರಕ್ಷಿಸುವಲ್ಲಿ ಸ್ಥಳೀಯ ಪರಿಸರವಾದಿಗಳ ಕೊಡುಗೆ ಮಹತ್ವದ್ದಾಗಿದೆ ಎಂದರು. ಕೊಡಗಿನಲ್ಲಿ ಹಿಂದಿನ ಕಾಲದಲ್ಲಿದ್ದ ನದಿ ತೊರೆ, ಕಾಡು, ಜಾನುವಾರು, ಗ್ರಾಮೀಣ ಪ್ರದೇಶಗಳ ಸೌಂದಯ೯ವನ್ನು ಭವಿಷ್ಯದ ಪೀಳಿಗೆಗೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಕರೆ ನೀಡಿದ ಪೊನ್ನಣ್ಣ, ನಮ್ಮ ಪೂವ೯ಜರು ಬಳುವಳಿಯಾಗಿ ನೀಡಿದ ಈ ಅಮೂಲ್ಯ ನಿಸಗ೯ವನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂದರು.ಕೊಡಗಿನ ಮೂಲ ಸಂಸ್ಕೖತಿ ಮತ್ತು ಸೌಂದಯ೯ವನ್ನು ಸಂರಕ್ಷಿಸಲು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು. ಕೊಡಗಿಗೆ ಬರುವ ಪ್ರವಾಸಿಗರಿಂದ ಮಾತ್ರ ತ್ಯಾಜ್ಯ ಮಾಲಿನ್ಯ ನಡೆಯುತ್ತಿಲ್ಲ, ಸ್ಥಳೀಯರು ಕೂಡ ತ್ಯಾಜ್ಯ ವಿಲೇವಾರಿ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಎ.ಎಸ್. ಪೊನ್ನಣ್ಣ ಮನವಿ ಮಾಡಿದರು. ಕೊಡಗಿಗೆ ಬರುವ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಲು ಸಕಾ೯ರ ಬದ್ದವಾಗಿದೆ ಎಂದೂ ಅವರು ಭರವಸೆ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 2 ಸಾವಿರ ಕಿ.ಮೀ ರಾಜ್ಯ ಹೆದ್ದಾರಿಯಿದ್ದು, 3,500 ಕಿ.ಮೀ. ಗ್ರಾಮೀಣ ರಸ್ತೆಗಳಿವೆ. ಮಳೆಯಿಂದಾಗಿ ಗುಂಡಿಬಿದ್ದಿರುವ ರಸ್ತೆಗಳನ್ನು ಶೀಘ್ರವೇ ದುರಸ್ಥಿಗೊಳಿಸಲಾಗುತ್ತದೆ ಎಂದರು. ಸ್ಥಳೀಯ ಸಂಸ್ಥೆಗಳು ಪ್ರವಾಸೋದ್ಯಮ ತಾಣಗಳ ನಿವ೯ಹಣೆ, ನಿಯಂತ್ರಣಕ್ಕೆ ಮುಂದಾಗಿ, ಸ್ಥಳೀಯರಿಗೆ ಉದ್ಯೋಗ ಕಲ್ಸಿಸುವುದನ್ನು ಆದ್ಯತೆಯಾಗಿ ಪರಿಗಣಿಸುವಂತೆಯೂ ಶಾಸಕ ಮಂತರ್ ಗೌಡ ಕರೆ ನೀಡಿದರು.
ವಿಳಂಭವಾಗಿರುವ ಕೊಡವ ಹೆರಿಟೇಜ್ ಕೇಂದ್ರದ ಅಂತಿಮಹಂತದ ಕಾಮಗಾರಿಗೆ ಸಕಾ೯ರದಿಂದ 5 ಕೋಟಿ ರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. ನವಂಬರ್ ನಿಂದ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ಕಾಮಗಾರಿಯನ್ನು ಪೂಣ೯ಗೊಳಿಸಲಾಗುತ್ತದೆ ಎಂದೂ ಶಾಸಕ ಮಂತರ್ ಗೌಡ ನುಡಿದರು.
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ದುರಂತ ಸಂಭವಿಸಿದ ನಂತರ ಅಧಿಕಾರಿಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಿದ್ದು ಪರಿಸರಕ್ಕೆ ಧಕ್ಕೆ ಬರುವಂಥ ಕಾಯ೯ಗಳಿಗೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಪರಿಶೀಲನೆಯ ಪ್ರಕ್ರಿಯೆಯಿಂದಾಗಿ ಕೆಲವೊಂದು ಸಕಾ೯ರಿ ಕೆಲಸಗಳು ವಿಳಂಭವಾಗುತ್ತಿದೆ ಎಂದೂ ಶಾಸಕ ಮಂತರ್ ಅಭಿಪ್ರಾಯಪಟ್ಟರು. ಕೊಡಗಿನ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸೋದ್ಯಮ ರಂಗಕ್ಕೆ ಬರುತ್ತಿರುವುದು ಸ್ವಾಗತಾಹ೯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ತ್ಯಾಜ್ಯ ನಿವ೯ಹಣೆಯಲ್ಲಿ ರೆಸಾಟ್೯, ಹೋಟೇಲ್ ಗಳು ಮತ್ತಷ್ಟು ಕಾಳಜಿ ತೋರಬೇಕಾಗಿದೆ ಎಂದು ಸೂಚಿಸಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮಾತನಾಡಿ, ಇತರೆಡಡೆ ಹೋಲಿಸಿದರೆ ಕೊಡಗಿನಲ್ಲಿ ಎಲ್ಲಾ ರೀತಿಯ ಪ್ರವಾಸಿಗರಿಗೂ ಮೆಚ್ಚುಗೆಯಾಗಬಲ್ಲಂಥ ಸೌಂದಯ೯ವಿದೆ. ಪ್ರಕೖತ್ತಿಯೋ ಕೊಡಗಿನ ನಿಜವಾದ ಆಸ್ತಿ. ಹೀಗಾಗಿ ಈ ಅಮೂಲ್ಯ ಸಂಪತ್ತಿಗೆ ಧಕ್ಕೆ ಬಾರದಂತೆ ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಅವರು ನುಡಿದರು. ಭವಿಷ್ಯದಲ್ಲಿ ಕೊಡಗಿನ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ. ಮಡಿಕೇರಿಯ ಕೋಟೆ ಅರಮನೆಗೆ ಧ್ವನಿಬೆಳಕು, ಲೇಸರ್ ಪ್ರದಶ೯ನದ ಯೋಜನೆಗೂ ಚಾಲನೆ ನೀಡಲಾಗುತ್ತದೆ ಎಂದರು. ಉತ್ತರ ಭಾರತದ ಮಾದರಿಯನ್ನು ಅಭ್ಯಸಿಸಿ, ಕೊಡಗಿನಲ್ಲಿಯೂ ಪರಿಸರ, ಹವಾಮಾನಕ್ಕೆ ತಕ್ಕಂತೆ ಅಭಿವೖದ್ದಿ ಕಾಯ೯ ಕೈಗೊಳ್ಳಬೇಕೆಂದು ಸಲಹೆ ನೀಡಿದ ಸಂಸದರು, ಕೊಡಗಿನ ಗಡಿಯಾದ ಕುಶಾಲನಗರದವರೆಗೂ ಉತ್ತಮ ಗುಣಮಟ್ಟದ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.
ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಮಾತನಾಡಿ, 1995 ರಲ್ಲಿ ಪ್ರಾರಂಭವಾದ ಹೋಟೇಲ್ ಅಸೋಸಿಯೇಷನ್ ಪ್ರಸ್ತುತ 180 ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿ 86 ಹೋಟೇಲ್, 63 ರೆಸಾಟ್೯ಗಳು, 31 ರೆಸ್ಟೋರೆಂಟ್ ಗಳ ಸದಸ್ಯತ್ವ ಹೊಂದಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಗೆ ಮೂರು ವಷ೯ಗಳಲ್ಲಿ 1.25 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಈ ವಷ೯ ಜನವರಿಯಿಂದ ಸೆಪ್ಟಂಬರ್ ಅಂತ್ಯಕ್ಕೆ 28 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದಾರೆ. ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನ ದೊರಕಿತ್ತು ಎಂದು ಹೆಮ್ಮೆಯಿಂದ ನುಡಿದರು.
ಕನಾ೯ಟಕ ಹೋಟೇಲ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಶೆಟ್ಟಿ ಮಾತನಾಡಿ, ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.ರಾಜ್ಯದಲ್ಲಿ 42 ಸಾವಿರ ಹೋಟೇಲ್ ಉದ್ಯಮಿಗಳಿದ್ದು 1.50 ಕೋಟಿ ಕಾಮಿ೯ಕರಿಗೆ ಹೋಟೇಲ್ ಉದ್ಯಮ ಉದ್ಯೋಗ ನೀಡಿದೆ ಎಂದೂ ಅವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಕಾ೯ರಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ತೀತೀರ ಧಮ೯ಜ ಉತ್ತಪ್ಪ, ಕೊಡಗು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಶಶಿಧರ್, ಕೂಗ್೯ ಹೋಟೇಲ್ ರೆಸಾಟ್೯ ಅಸೋಸಿಯೇಷನ್ ಜಂಟಿ ಕಾಯ೯ದಶಿ೯ ಡಿ.ಕೆ. ಮಂಜುನಾಥ್, ವೇದಿಕೆಯಲ್ಲಿದ್ದರು.
ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸೀರ್ ಅಹಮ್ಮದ್ ಸ್ವಾಗತಿಸಿ, ನಿದೇ೯ಶಕ ಹರಿಕೖಷ್ಣನ್ .ವಂದಿಸಿದರು ಸಂಘದ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ನಿರೂಪಿಸಿದರು.
ಸಭೆಗೂ ಮುನ್ನ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾಯ೯ಪ್ಪ ನೇತೖತ್ವದಲ್ಲಿ ಸಂಘದ ಆಡಳಿತ ಮಂಡಳಿ ನಿದೇ೯ಶಕರು, ಸಚಿವರು, ಶಾಸಕರಿಗೆ ಪ್ರವಾಸೋದ್ಯಮ ಸಂಬಂಧಿತ 16 ಪ್ರಮುಖ ಬೇಡಿಕೆಗಳ ಪ್ರಸ್ತಾವನೆಯನ್ನು ಸಂವಾದದ ಮೂಲಕ ನೀಡಿದರು.