Kodagu

ಆರ್.ಎಸ್.. ಎಸ್ ಕಟ್ಟಾಳು ಚಕ್ಕೇರ ಮನು ಕಾವೇರಪ್ಪ ನಿಧನಕ್ಕೆ ಅಪ್ಪಚ್ಚು ರಂಜನ್ ಸಂತಾಪ

admincoorgdaily

ಆರ್.ಎಸ್.. ಎಸ್ ಕಟ್ಟಾಳು ಚಕ್ಕೇರ ಮನು ಕಾವೇರಪ್ಪ ನಿಧನಕ್ಕೆ ಅಪ್ಪಚ್ಚು ರಂಜನ್ ಸಂತಾಪ
ಮಡಿಕೇರಿ;
ಕೊಡಗು ಜಿಲ್ಲಾ ಆರ್. ಎಸ್. ಎಸ್. ಸರ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ರವರ  ನಿಧನಕ್ಕೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  

ಕೊಡಗಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು ಆಗಿದ್ದ ಚಕ್ಕೇರ ಮನು ಅವರು ಹಠತ್ ಹೃದಯಾಘಾತದಿಂದ ನಿಧನ  ಹೊಂದಿದ್ದು  ಇವರ ನಿಧನದಿಂದ ಕೊಡಗು ಬಿಜೆಪಿ ಒಬ್ಬ ಹಿರಿಯ ಮಾರ್ಗ ದರ್ಶಕರನ್ನು  ಹಾಗೂ ಹಿಂದೂ ಧರ್ಮ ಕ್ಕಾಗಿ ಹಗಲಿರುಳು ಶ್ರಮಿಸಿದ   ನಾಯಕನನ್ನು ಕಳೆದು ಕೊಂಡಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಯನ್ನು ಕರುಣಿಸಲಿ ಹಾಗೂ ಇವರ ಕುಟುಂಬಕ್ಕೆ ದುಖಃವನ್ನು ಸಹಿಸುವ ಶಕ್ತಿ ಯನ್ನು ಭಗವಂತನು ಕರುಣಿಸಲಿ ಎಂದು ಅಪ್ಪಚ್ಚು ರಂಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.