Kodagu

ಮೂಲಭೂತ ಸೌಕರ್ಯ ಹಾಗೂ ಕಾವೇರಿ ಮಾಲಿನ್ಯ ತಡೆಗಟ್ಟುವಂತೆ ಶಾಸಕರಿಗೆ ಮನವಿ

admincoorgdaily

ಮೂಲಭೂತ ಸೌಕರ್ಯ ಹಾಗೂ ಕಾವೇರಿ ಮಾಲಿನ್ಯ ತಡೆಗಟ್ಟುವಂತೆ ಶಾಸಕರಿಗೆ ಮನವಿ
ಸಿದ್ದಾಪುರ :- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಸಲು 
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರಿಗೆ ಮನವಿ ಸಲ್ಲಿಸಿದರು.

ನೆಲ್ಲಿಹುದಿಕೇರಿ ಗ್ರಾಮೀಣ ರಸ್ತೆಗಳು ದುರಸ್ತಿಪಡಿಸುವ ಬಗ್ಗೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಡುವ ಬಗ್ಗೆ ಹಾಗೂ ಜನ ವಸತಿ ಪ್ರದೇಶ ಮತ್ತು ಮೀನು ವ್ಯಾಪಾರಸ್ಥರು ಶೌಚಾಲಯ ನೀರು ಹಾಗೂ ಮೀನು ಕೊಳಚೆ ನೀರುಗಳನ್ನು ನೇರವಾಗಿ  ಕಾವೇರಿ ನದಿಗೆ ಬಿಡುತ್ತಿದ್ದು ಕಾವೇರಿ ನದಿ ಮಾಲಿನ್ಯವಾಗುತ್ತಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ  ಮನವಿ ಪತ್ರವನ್ನು ನೀಡಲಾಯಿತು.

 ಈ ಸಂದರ್ಭದಲ್ಲಿ  ಕರವೇ ಸ್ವಾಭಿಮಾನಿ ಬಳಗ ಕೊಡಗು ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್  ಜಿಲ್ಲಾ ಉಪಾಧ್ಯಕ್ಷ ಸಜಿಲ್ ಕುಮಾರ್ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಸಫೀಕ್  ಕುಶಾಲನಗರ ತಾಲೂಕು ಅಧ್ಯಕ್ಷ ಹರೀಶ್  ನೆಲ್ಲಿಹುದಿಕೇರಿ  ಘಟಕ ಅಧ್ಯಕ್ಷ ಗಿರೀಶ್ ಕಾರ್ಯದರ್ಶಿ ದಿಲೀಪ್ ಉಪಾಧ್ಯಕ್ಷ ರಸಾದ್ ಸಹ ಕಾರ್ಯದರ್ಶಿ ನಂದ  ಘಟಕ ಸಲಹೆಗಾರ ಚಂದ್ರ ಮಾಜಿ ಸೈನಿಕರು ಮಡಿಕೇರಿ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ವೆಂಕಟೇಶ್ ಕಾರ್ಯಕರ್ತರಾದ ಶಿವದಾಸ್  ಸಂತೋಷ್ .ಕರ್ಪಯ್ಯ  ಹಾಜರಿದ್ದರು.