Kodagu

ಕೊಡವ ಲ್ಯಾಂಡ್ ರಚನೆ ಅರ್ಜಿ ಸಲ್ಲಿಸಿದ್ದು ಖಂಡನೀಯ: ಸ್ವಾಯತ್ತತೆ ಹೆಸರಿನಲ್ಲಿ ಸಾಮರಸ್ಯಕ್ಕೆ ಧಕ್ಕೆ ಬೇಡ - ವೀರಶೈವ ಲಿಂಗಾಯತ ಮಹಾಸಭಾ

admincoorgdaily

ಕೊಡವ ಲ್ಯಾಂಡ್ ರಚನೆ ಅರ್ಜಿ ಸಲ್ಲಿಸಿದ್ದು ಖಂಡನೀಯ: ಸ್ವಾಯತ್ತತೆ ಹೆಸರಿನಲ್ಲಿ ಸಾಮರಸ್ಯಕ್ಕೆ ಧಕ್ಕೆ ಬೇಡ - ವೀರಶೈವ ಲಿಂಗಾಯತ ಮಹಾಸಭಾ
ಮಡಿಕೇರಿ: ಕೊಡಗು ನೂರಾರು ವರ್ಷಗಳಿಂದ ಸರ್ವ ಸಮುದಾಯಗಳ ಸಹಬಾಳ್ವೆಯ ನಾಡು. ಒಂದು ಜನಾಂಗದ ಸ್ವಾಯತ್ತತೆಯ ಹೆಸರಿನಲ್ಲಿ ಇಲ್ಲಿನ ಸಾಮರಸ್ಯಕ್ಕೆ ಧಕ್ಕೆ ತರಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಘಟಕ ಅಧ್ಯಕ್ಷ ಎಚ್.ವಿ.ಶಿವಪ್ಪ ತಿಳಿಸಿದ್ದಾರೆ.

ಕೊಡವ ಸ್ವಾಯತ್ತ ಮಂಡಳಿ, ಕೊಡವ ಲ್ಯಾಂಡ್ ರಚನೆಗೆ ಸಂಘಟನೆಯೊಂದು ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಖಂಡನೀಯ. ಜಿಲ್ಲೆಯಲ್ಲಿ ಎಲ್ಲ ಜನಾಂಗಕ್ಕೂ ಸಮಾನ ಹಕ್ಕಿದೆ. ಈ ಬೇಡಿಕೆ ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ಧವಲ್ಲ, ಸಹಬಾಳ್ವೆ ಉಳಿಸುವುದಕ್ಕಾಗಿ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಪ್ರಮುಖರಾದ ವಿರೂಪಾಕ್ಷ, ಶುಭಶೇಖರ್, ಮೂರ್ತಿ ಉಪಸ್ಥಿತರಿದ್ದರು.