ಮಡಿಕೇರಿ ಯುವ ದಸರಾ ನೃತ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ
admincoorgdaily

ಮಡಿಕೇರಿ ಸೆ.11 : ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಅಕ್ಟೋಬರ್ 18ರಂದು ಯುವ ದಸರಾ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯಮಟ್ಟದ ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಪರ್ಧೆಯಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಹೊರತುಪಡಿಸಿ ಇತರೆ ಯಾವುದೇ ನೃತ್ಯ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಗೆ ಯಾವುದೇ ವಯೋಮಿತಿಯ ನಿರ್ಬಂಧವಿಲ್ಲ.
ಪ್ರತಿ ತಂಡದಲ್ಲಿ ಕನಿಷ್ಠ 12 ಹಾಗೂ ಗರಿಷ್ಠ 30 ಮಂದಿ ಕಲಾವಿದರು ಇರಬೇಕು.
ನೃತ್ಯ ಪ್ರದರ್ಶನಗಳು ಸಾಮಾಜಿಕ ಪರಿಕಲ್ಪನೆ ಹಾಗೂ ಉತ್ತಮ ಸಂದೇಶಗಳನ್ನು ಒಳಗೊಂಡಿರಬೇಕು. ಹಾಡಿನ ಭಾಷೆ ಹಾಗೂ ಉಡುಗೆ-ತೊಡುಗೆಗಳು ಸಭ್ಯವಾಗಿರಬೇಕು. ಯಾವುದೇ ವ್ಯಕ್ತಿ ಅಥವಾ ಸಮುದಾಯದ ನಂಬಿಕೆಗೆ ನೋವುಂಟು ಮಾಡುವಂತಹ ಪ್ರದರ್ಶನಗಳಿಗೆ ಅವಕಾಶವಿರುವುದಿಲ್ಲ.
ಪ್ರತಿ ತಂಡಕ್ಕೆ 10+2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಬೆಂಕಿ, ಬಣ್ಣ, ನೀರು ಸೇರಿದಂತೆ ವೇದಿಕೆಗೆ ಹಾನಿ ಉಂಟುಮಾಡುವ ಯಾವುದೇ ಪರಿಕರಗಳನ್ನು ಬಳಸುವಂತಿಲ್ಲ. ಸ್ಪರ್ಧೆಯ ತೀರ್ಪುಗಾರರ ತೀರ್ಮಾನವನ್ನು ಎಲ್ಲಾ ಸ್ಪರ್ಧಿಗಳು ಗೌರವಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು.
ಸ್ಪರ್ಧೆಯ ನೀತಿ-ನಿಯಮಗಳನ್ನು ಎಲ್ಲಾ ತಂಡಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಯುವ ದಸರಾ ಸಮಿತಿಯ ಅಧ್ಯಕ್ಷ ಕವನ್ ಕೊತ್ತೋಳಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕವನ್ ಕೊತ್ತೋಳಿ — 9741292825, ಲೀನೆಶ್ — 99866 19262 ಅವರನ್ನು ಸಂಪರ್ಕಿಸಬಹುದು.