Kodagu

ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್-2027ಕ್ಕೆ ಅರ್ಜಿ ಆಹ್ವಾನ

admincoorgdaily

ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್-2027ಕ್ಕೆ ಅರ್ಜಿ ಆಹ್ವಾನ
ಮಡಿಕೇರಿ: ಪ್ರಧಾನಮಂತ್ರಿ ಅವರೊಂದಿಗೆ ನೇರ ಸಂವಾದ ನಡೆಸುವ ಅವಕಾಶ ಒಳಗೊಂಡ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್-೨೦೨೭ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ೧೫ರಿಂದ ೨೯ ವರ್ಷದೊಳಗಿನ ಯುವಕರು ಮೈ ಭಾರತ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

 ೨೦೨೭ರ ಜ.೧೦ರಿಂದ ೧೨ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆಯ ಮುಂದುವರಿದ ಭಾಗವಾಗಿದೆ. ಕ್ವಿಜ್, ಪ್ರಬಂಧ/ಉಪನ್ಯಾಸ ಮತ್ತು ಪಿಪಿಟಿ ಪ್ರಸ್ತುತಿ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕರ್ನಾಟಕಕ್ಕೆ ತಂತ್ರಜ್ಞಾನ, ನಾವೀನ್ಯತೆ ಮತ್ತು ಭವಿಷ್ಯದ ಸಿದ್ಧತೆ ವಿಷಯ ನೀಡಲಾಗಿದೆ. ರಾಜ್ಯದಿಂದ ೪೫ ಮಂದಿ ಆಯ್ಕೆಯಾಗಿ, ಮೂವರು ರಾಷ್ಟ್ರಮಟ್ಟದಲ್ಲಿ ಪ್ರಸ್ತುತಿ ನೀಡಲಿದ್ದಾರೆ. ಜಾನಪದ ನೃತ್ಯ, ಗೀತೆ, ಚಿತ್ರಕಲೆ ಸೇರಿ ೫ ಸಾಂಸ್ಕೃತಿಕ ವಿಭಾಗಗಳಲ್ಲೂ ಸ್ಪರ್ಧೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮೈ ಭಾರತ್‌ನ ಸ್ವಯಂ ಸೇವಕರಾದ ದೀಪ್ತಿ, ರಂಜಿತ, ಪ್ರಮುಖರಾದ ಪಿ.ಪಿ.ಸುಕುಮಾರ್, ದೀಲಿಪ್ ಇದ್ದರು.