ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
admincoorgdaily

ಮಡಿಕೇರಿ:-ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲ್ಲೂಕಿನ 05, ಕುಶಾಲನಗರ ತಾಲ್ಲೂಕಿನ 04 ಒಟ್ಟು 09 ಅಂಗನವಾಡಿ ಕಂ ಕ್ರಷ್ ಕೇಂದ್ರ ಅನುಷ್ಠಾನಗೊಳಿಸಲಾಗುತ್ತಿದೆ.
ಅದಕ್ಕಾಗಿ ಸೋಮವಾರಪೇಟೆ ತಾಲ್ಲೂಕಿನ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ವೆಂಕಟೇಶ್ವರ ಬ್ಲಾಕ್, ಮಾದಾಪುರ ಗ್ರಾ.ಪಂ.ಯ ಬಂಬೂರು ಲೈನ್, ಕಿರಗಂದೂರು ಕೋವರ್‍ಕೊಲ್ಲಿ, ಆಲೂರು ಸಿದ್ದಾಪುರ ಗ್ರಾ.ಪಂ. ಬಡುಬನಹಳ್ಳಿ ಮತ್ತು ಕೊಡ್ಲಿಪೇಟೆ ಗ್ರಾ.ಪಂ.ಯ ನವಗ್ರಾಮ, ಕುಶಾಲನಗರ ತಾಲ್ಲೂಕಿನ 7ನೇ ಹೊಸಕೋಟೆ ಗ್ರಾ.ಪಂ.ಯ 7ನೇ ಹೊಸಕೋಟೆ, ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ, ಎಚ್.ಆರ್.ಪಿ.ಕಾಲೋನಿ ಮತ್ತು ತೊರೆನೂರು ಗ್ರಾ.ಪಂ. ಸಿದ್ದಲಿಂಗಪುರ ಈ 09 ಕೇಂದ್ರಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ನೇಮಕಾತಿ ಮಾಡಲು ಆಪ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್, 09 ಕೊನೆಯ ದಿನವಾಗಿದೆ. ಅರ್ಜಿಯನ್ನು ಅಕ್ಟೋಬರ್, 09 ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಭವನ ಕಟ್ಟಡ, ತಾಲ್ಲೂಕು ಪಂಚಾಯಿತಿ ಕಚೇರಿ ಆವರಣ, ಸೋಮವಾರಪೇಟೆ ಇಲ್ಲಿ ಕಚೇರಿ ಸಮಯದಲ್ಲಿ ಅರ್ಜಿ ನಮೂನೆಯನ್ನು ಪಡೆದು ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅವರು ತಿಳಿಸಿದ್ದಾರೆ.