ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನ
admincoorgdaily

ಮಡಿಕೇರಿ:-ಪ್ರಸಕ್ತ (2026-27) ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಕೊಡಗು ಜಿಲ್ಲೆಯ ವಿವಿಧ ಜಲಸಂಪನ್ಮೂಲಗಳಿಗೆ 80-100 ಮೀ.ಮೀ. ಗಾತ್ರದ ಬಲಿತ ಬಿತ್ತನೆ ಮೀನುಮರಿಯನ್ನು ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿ (ಸಾಗಾಣಿಕೆ ವೆಚ್ಚ ಸೇರಿ) ಅನುದಾನ ಲಭ್ಯತೆಗನುಗುಣವಾಗಿ ಸರಬರಾಜು ಮಾಡಲು ಮೀನುಗಾರಿಕೆ ಇಲಾಖೆಯಲ್ಲಿ ನೋಂದಾಯಿಸಿರುವ ಆಸಕ್ತ ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಪಾನ್ ಮೀನು ಮರಿಗಳನ್ನು ಸರ್ಕಾರಿ ಮೀನುಮರಿ ಉತ್ಪಾದನಾ ಕೇಂದ್ರಗಳಿಂದ ಕಡ್ಡಾಯವಾಗಿ ಖರೀದಿಸಿ ಪಾಲನೆ ಮಾಡಿರತಕ್ಕದ್ದು. ಬಲಿತ ಬಿತ್ತನೆ ಮೀನುಮರಿ ತಳಿಗಳು ಕಟ್ಲಾ ದರ ಪ್ರತಿ ಮೀನುಮರಿಗೆ 1.50, ರೋಹು 1.20, ಮೃಗಾಲ್ 1.20 ರೂ. ಮತ್ತು ಸಾಮಾನ್ಯ ಗೆಂಟೆ ರೂ.1.20 ದರ ನಿಗದಿಪಡಿಸಲಾಗಿದೆ.
ನಿಗದಿತ ಅರ್ಜಿ ಮತ್ತು ಷರತ್ತು ನಿಬಂಧನೆಗಳ ನಮೂನೆಯನ್ನು ಮೀನುಗಾರಿಕೆ ಇಲಾಖೆಯ ಜಿಲ್ಲಾ/ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಸೆಪ್ಟೆಂಬರ್, 25 ರಿಂದ ಪಡೆಯಬಹುದು.
ಅರ್ಜಿ ನಮೂನೆ ಸಲ್ಲಿಸಲು ಅಕ್ಟೋಬರ್, 09 ಕೊನೆಯ ದಿನವಾಗಿದೆ. ಅರ್ಜಿಯನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಐ.ಟಿ.ಐ ಜಂಕ್ಷನ್ ಕಾಲೇಜು ರಸ್ತೆ, ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.