ಮಕ್ಕಳ ಕಲಿಕೆ ಶಿಕ್ಷಕರ ಕ್ರಿಯಾಶೀಲತೆಗೆ ಮೆಚ್ಚುಗೆ
admincoorgdaily

ಸಿದ್ದಾಪುರ:-
ಪ್ರಧಾನಮಂತ್ರಿ ಭಾರತವನ್ನು ಬೆಳೆಸುವ ಶಾಲೆಗಳ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ
ಪಾಲಿಬೆಟ್ಟ ಪಿಎಂಶ್ರೀ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಡಯಟ್ ಹಿರಿಯ ಉಪನ್ಯಾಸಕಿ ಶ್ರೀಮತಿ ಮೀರಾ, ಬಿಆರ್‌ಪಿ ಶ್ರೀಮತಿ ಶೈಲಾ ಹಾಗೂ ಸಿಆರ್‌ಪಿ ಶ್ರೀ ಕರುಂಬಯ್ಯ ಕೆ.ಸಿ. ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಿಎಂಶ್ರೀ ಯೋಜನೆಯಡಿ ಆರಂಭಿಸಲಾಗಿರುವ ಎಲ್‌ಕೆಜಿ, ಯುಕೆಜಿ ಹಾಗೂ ಒಂದರಿಂದ ಐದನೇ ತರಗತಿವರೆಗೆ ನಡೆಯುತ್ತಿರುವ ದ್ವಿಭಾಷಾ ತರಗತಿಗಳ ನಿರ್ವಹಣೆ ಮಕ್ಕಳ ಕಲಿಕಾ ಪ್ರಗತಿ ಹಾಗೂ ಬೋಧನಾ ಚಟುವಟಿಕೆಗಳನ್ನು ತಂಡ ಪರಿಶೀಲಿಸಿತು. ಈ ಸಂದರ್ಭದಲ್ಲಿ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯೊಂದಿಗೆ ಮಕ್ಕಳ ಕಲಿಕೆ ಮತ್ತು ತರಗತಿ ನಿರ್ವಹಣೆ ಕುರಿತು ಚರ್ಚಿಸಿ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು.
ಮಕ್ಕಳ ಕಲಿಕೆಯಲ್ಲಿ ಕಂಡುಬಂದ ಆಸಕ್ತಿ ಹಾಗೂ ಪಿಎಂಶ್ರೀ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಯ ಕ್ರಿಯಾಶೀಲತೆಯನ್ನು ಅಧಿಕಾರಿಗಳು ಪ್ರಶಂಸಿಸಿದರು ಯೋಜನೆಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಮುಂಬರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸುವ ಉದ್ದೇಶದಿಂದ ಶಿಕ್ಷಕರು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ತಂಡ ಮಾರ್ಗದರ್ಶನ ನೀಡಿತು.