ಕೃತಕ ಬುದ್ಧಿ ಮತ್ತೆಯ ವ್ಯವಸ್ಥೆ ನಮಗೇ ಬುದ್ದಿ ಕಲಿಸುವಂತಾಗಿದೆ; ಅನಿಲ್ ಹೆಚ್. ಟಿ ಆತಂಕ
admincoorgdaily

ಮಡಿಕೇರಿ;
ಕೃತಕ ಬುದ್ಧಿ ಮತ್ತೆ ಆಧೀನಕ್ಕೆ ನಮ್ಮ ಬುದ್ದಿಯನ್ನು ಕೊಟ್ಟು ಆ ಬುದ್ದಿ ಮತ್ತೆ ಸೃಷ್ಟಿಸುವ ಪದಗಳನ್ನು ನೈಜ ಭಾಷೆಯೆಂದು ಭಾವಿಸಿ ಮೂಲ ಭಾಷೆಯನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ಲಯನ್ಸ್ ಸಂಸ್ಥೆ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನದ ಅಮೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿ ಮತ್ತೆಯ ವ್ಯವಸ್ಥೆ ನಮಗೇ ಬುದ್ದಿ ಕಲಿಸುವಂತಾಗಿದೆ. ಕನ್ನಡದಂತಹ ಸರಳ ಭಾಷೆ ಕೂಡ ಎ. ಐ. ಮಾಯಾಜಾಲಕ್ಕೆ ಸಿಲುಕಿ ತನ್ನ ನೈಜತೆ ಮತ್ತು ಆಹ್ಲಾದತೆಯನ್ನು ಕಳೆದುಕೊಳ್ಳತ್ತಿದೆ. ಹಲವಾರು ವರ್ಷಗಳಿ೦ದ ನಾವು ಬಳಸುತ್ತಿದ್ದ ಸುಂದರ ಭಾಷೆಯನ್ನು ಯಂತ್ರದ ಕೈಗೆ ನೀಡಿ ಅದು ಹೇಳಿದ್ದೆ ಸರಿ ಎಂಬ ಭ್ರಮೆಯಲ್ಲಿ ನಾವಿದ್ದೇವೆ ಎಂದು ಅನಿಲ್ ನುಡಿದರು.
ನಮ್ಮ ಮೊಬೈಲ್‌ಗಳು,ಕಂಪ್ಯೂಟರ್ ಗಳು, ಎ. ಐ.ಗಳು ನಮಗಿಂತ ಚೆನ್ನಾಗಿ ಕನ್ನಡ ಭಾಷೆಯನ್ನು ಬಳಸುತ್ತಿದೆ ಎಂಬ ತಪ್ಪು ಕಲ್ಪನೆ ಯಿಂದ ಹೊರಬಂದು ನಮ್ಮ ಮನಸ್ಸಿನ ಭಾಷೆಯಾಗಿ ಕನ್ನಡವನ್ನು ಬಳಸುವುದನ್ನು ಮುಂದುವರಿಸಬೇಕು ಎಂದೂ ಅನಿಲ್ ಹೆಚ್.ಟಿ. ಸಲಹೆ ನೀಡಿದರು.
ನಿತ್ಯದ ಒಳಕೆಯಲ್ಲಿ ಕನ್ನಡವನ್ನೇ ಹೆಚ್ಚು ಬಳಸುವ ಮೂಲಕ, ಕನ್ನಡ ಪತ್ರಿಕೆಗಳನ್ನು ಹೆಚ್ಚು ತರಿಸಿ ಓದುವ ಮೂಲಕ, ಕನ್ನಡ ಸಾಹಿತ್ಯವನ್ನು ಪೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಪ್ರತಿಯೋರ್ವ ಕನ್ನಡಿಗನು ರಕ್ಷಿಸಲು ಸಾಧ್ಯ ಎಂದು ಅನಿಲ್ ಹೇಳಿದರು
ಪರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರೊಂದಿಗೆ ಅವರ ಭಾಷೆಯಲ್ಲಿ ವ್ಯವಹರಿಸುವ ಬದಲಾಗಿ ನಮ್ಮ ಕನ್ನಡದಲ್ಲೇ
ಮಾತಾನಾಡುವ ಮೂಲಕ ಕನ್ನಡ ಗೊತ್ತಿಲ್ಲದವರೂ ಕನ್ನಡ ಗೊತ್ತು ಎಂದು ಹೆಮ್ಮೆಯಿಂದ ಹೇಳುವಂತಹ ವಾತಾವರಣವನ್ನು ಪ್ರತಿಯೊಬ್ಬ ಕನ್ನಡಿಗರು ಸ್ಪಷ್ಟಿಸುವ ಅನಿವಾರ್ಯತೆಯಿದೆ ಎಂದು ಅನಿಲ್ ಹೆಚ್.ಟಿ. ಕರೆ ನೀಡಿದರು
ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಲ್ ಮೋಹನ್ ಕುಮಾರ್ ಮಾತನಾಡಿ ಸಮಾಜಕ್ಕೆ ಹಿರಿಯರು ನೀಡಿರುವ ಕೊಡುಗೆ ಮತ್ತು ಮಾರ್ಗ ದರ್ಶನ ಅಮೂಲ್ಯವಾಗಿದೆ.
ಹಿರಿಯರು ಸೇವೆಯನ್ನು ಯರೋಬ್ಬರು ಮರೆಯದೆ ಅವರ ಸೇವೆಯನ್ನು ಸದಾ ಸ್ಮಂಸಬೇಕೆಂದು ಹೇಳಿದರು.
ಕಮಲ ಮುರುಗೇಶ್ ಪ್ರಾರ್ಥಿಸಿ, ಪ್ರೇಮಾ ಕೋಟಿ
ಧ್ವಜ ವಂದನೆ ನಿರ್ವಹಿಸಿ, ಸತೀಶ್ ರೈ ಲಯನ್ಸ್ ನ ನೀತಿ ಸಂಹಿತೆ ವಾಚಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಕೆ. ಮಧುಕರ್,ಕೆ.ಕೆ. ದಾಮೋದರ್, ಗೀತಾ ಮಧುಕರ್ ನಿರ್ವಹಿಸಿದರು.
ಮಡಿಕೇರಿ ಲಯನ್ಸ್ ಸಂಸ್ಥೆಯ ಖಜಾಂಚಿ . ನವೀನ್ ಅಂಬೆಕಲ್ ವಂದಿಸಿದರು.
*ಹಿರಿಯರಿಗೆ ಸನ್ಮಾನ.*
75 ವರ್ಷ ಪೂರೈಸಿರುವ ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರಾಗಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಮೋಹನ್ ದಾಸ್, ಸೋಮಣ್ಣ, ಮುರುಗೇಶ್, ಮತ್ತು ಕೋಟಿ ಅವರನ್ನು ಇದೇ ಸಂದರ್ಭದಲ್ಲಿ ಅಮೃತೋತ್ಸವ ಯೋಜನೆಯಡಿಯಲ್ಲಿ ಸನ್ಮಾನಿಸಲಾಯಿತು.