Kodagu

ಶಿಕ್ಷಕರ ದಿನಾಚರಣೆ ಅಂಗವಾಗಿ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಾದ ಜಿಮ್ಮಿ ಸಿಕ್ವೇರಾ ಅವರಿಗೆ ಸನ್ಮಾನ

admincoorgdaily

ಶಿಕ್ಷಕರ ದಿನಾಚರಣೆ ಅಂಗವಾಗಿ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಾದ ಜಿಮ್ಮಿ ಸಿಕ್ವೇರಾ ಅವರಿಗೆ ಸನ್ಮಾನ
ಸಿದ್ದಾಪುರ: ಶಿಕ್ಷಕರ ದಿನಾಚರಣೆ ಅಂಗವಾಗಿ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಾದ ಜಿಮ್ಮಿ ಸಿಕ್ವೇರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂಜಲಗರೆಯ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ, ಶಿಕ್ಷಕರು ನವ ಸಮಾಜದ ನಿರ್ಮಾಣದ ಸೂತ್ರದಾರರು. ಜಿಮ್ಮಿ ಸಿಕ್ವೇರಾ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದು, ಸ್ಕೌಟ್, ಗೈಡ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರೀಯರಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಜಿಮ್ಮಿ ಸಿಕ್ವೇರಾ, ಶಿಕ್ಷಕರಾಗಿ ತಮ್ಮಿಂದಾಗುವ ಸೇವೆಯನ್ನು ಸಮಾಜಕ್ಕೆ ನೀಡಿದ್ದೇನೆ. ನಿವೃತ್ತಿಯಾದರೂ, ಈಗಲೂ ಹಳೇ ವಿದ್ಯಾರ್ಥಿಗಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಿವೃತ್ತ ಜೀವನದಲ್ಲಿ ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎ.ಎನ್ ವಾಸು, ನಿರ್ದೇಶಕ ಆರ್.ಸುಬ್ರಮಣಿ, ತಾಲ್ಲೂಕು ಸಂಘದ ಕಾರ್ಯದರ್ಶಿ ಎ.ಎಸ್ ಮುಸ್ತಫ, ನಿರ್ದೇಶಕರಾದ ತೇಜಸ್ ಪಾಪಾಯ್ಯ, ಎಂ.ಎ ಕೃಷ್ಣ ಹಾಜರಿದ್ದರು.
ಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎ.ಎನ್ ವಾಸು, ನಿರ್ದೇಶಕ ಆರ್.ಸುಬ್ರಮಣಿ, ತಾಲ್ಲೂಕು ಸಂಘದ ಕಾರ್ಯದರ್ಶಿ ಎ.ಎಸ್ ಮುಸ್ತಫ, ನಿರ್ದೇಶಕರಾದ ತೇಜಸ್ ಪಾಪಾಯ್ಯ, ಎಂ.ಎ ಕೃಷ್ಣ ಹಾಜರಿದ್ದರು.