ಕಾಡುಕೋಣ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಗಂಭೀರ
admincoorgdaily

ಸಿದ್ದಾಪುರ:
ಕಾಡುಕೋಣ ದಾಳಿಗೆ ಒಳಗಾಗಿ ಅಸ್ಸಾಂ ಮೂಲದ 16 ವರ್ಷದ ಕಾರ್ಮಿಕ ಹಬೀಬ್ ಆಲಿ ಗಂಭೀರವಾಗಿ ಗಾಯಗೊಂಡ ಘಟನೆ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ.
ಚೆನ್ನಂಗಿ ಗ್ರಾಮದ ಅಜ್ಜಿನಿಕಂಡ ಕಾರ್ಯಪ್ಪ ಅವರ ತೋಟದಲ್ಲಿ ಘಟನೆ ಸಂಭವಿಸಿದ್ದು, ತೋಟದ ಕೆಲಸದಲ್ಲಿ ತೊಡಗಿದ್ದ ತನ್ನ ಪೋಷಕರಿಗೆ ನೀರು ಕೊಡಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾಡುಕೋಣ ದಾಳಿ ನಡೆಸಿದೆ ಎನ್ನಲಾಗಿದೆ.
ದಾಳಿಯಿಂದ ಹಬೀಬ್ ಆಲಿಯ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಅಮ್ಮತ್ತಿಯ ಆರ್.ಐ.ಎಚ್.ಪಿ. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.