Kodagu

ಬ್ಯಾಡಗೊಟ್ಟ ಬೂತ್ ನಲ್ಲಿ ಮತ ಅಳಿಸುವ ಹುನ್ನಾರ;ಮಡಿಕೇರಿಯಲ್ಲಿ ಎಸ್.ಡಿ.ಪಿಐ ಪ್ರತಿಭಟನೆ

admincoorgdaily

ಬ್ಯಾಡಗೊಟ್ಟ ಬೂತ್ ನಲ್ಲಿ ಮತ ಅಳಿಸುವ ಹುನ್ನಾರ;ಮಡಿಕೇರಿಯಲ್ಲಿ ಎಸ್.ಡಿ.ಪಿಐ ಪ್ರತಿಭಟನೆ
ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಬ್ಯಾಡಗೊಟ್ಟ ಗ್ರಾಮದ ಬೂತ್ ಸಂಖ್ಯೆ ೨೧ರಲ್ಲಿ ೬೩ ನಮೂನೆ-೭ ಗಳನ್ನು ಸೋಮವಾರಪೇಟೆ ಬಿಜೆಪಿ ಕಚೇರಿಯಲ್ಲಿ ಮುದ್ರಿಸಿ ಬಿಎಲ್ಒಗೆ ಸಲ್ಲಿಸಿರುವುದು ಬಹಿರಂಗವಾಗಿದೆ. ಇದು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗೆ ಧಕ್ಕೆ ತರುವ ಗಂಭೀರ ಪ್ರಕರಣವಾಗಿದ್ದು, ನಮೂನೆ-೭ ಸಿದ್ಧಪಡಿಸಿದವರು, ಮುದ್ರಿಸಿದವರು ಹಾಗೂ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಇದು ಒಂದೇ ಬೂತ್‌ಗೆ ಸೀಮಿತವೇ ಅಥವಾ ರಾಜ್ಯದ ಇತರ ಕಡೆ ನಡೆದಿದೆಯೇ ಎಂದು ಪರಿಶೀಲಿಸಲು ಎಸ್‌ಐಟಿ ರಚಿಸಬೇಕು. ಸಾಕ್ಷ್ಯಗಳನ್ನು ಸಂರಕ್ಷಿಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಎಸ್‌ಡಿಪಿಐ ಈಗಾಗಲೇ ಎಸ್‌ಐಆರ್ ವಿರೋಧಿಸಿ ಜ.೧೮ರಂದು ಗಾಂಧಿ ಮೈದಾನದಲ್ಲಿ ಜನಾಗ್ರಹ ಸಮಾವೇಶ ನಡೆಸಿತ್ತು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಮುಖಂಡರಾದ ಕೆ.ಕೆ.ಮೊಣ್ಣಪ್ಪ, ಡಿ.ಎಸ್.ನಿರ್ವಾಣಪ್ಪ, ನಗರಸಭೆ ಎಸ್‌ಡಿಪಿಐ ಸದಸ್ಯರಾದ ಮೇರಿ ವೇಗಸ್, ಮನ್ಸೂರು ಆಲಿ ಸೇರಿದಂತೆ ಎಸ್‌ಡಿಪಿಐ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.