Kodagu

ಕೊಡ್ಲಿಪೇಟೆ ಸಂತೆಯಲ್ಲಿ 20 ಕೆ.ಜಿ. ಗೋಮಾಂಸ ಮಾರಾಟಕ್ಕೆ ಯತ್ನ: ಅಸ್ಸಾಂ ಮೂಲದ ಇಬ್ಬರು ವಶಕ್ಕೆ

admincoorgdaily

ಕೊಡ್ಲಿಪೇಟೆ ಸಂತೆಯಲ್ಲಿ 20 ಕೆ.ಜಿ. ಗೋಮಾಂಸ ಮಾರಾಟಕ್ಕೆ ಯತ್ನ: ಅಸ್ಸಾಂ ಮೂಲದ ಇಬ್ಬರು ವಶಕ್ಕೆ
ಕೊಡ್ಲಿಪೇಟೆ; ಚಿಕ್ಕಕುಂದ ಸಮೀಪ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಬೆಸೂರು ಘಟಕದ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಕೊಡ್ಲಿಪೇಟೆ ಸಂತೆಯಲ್ಲಿ ಮಾರಾಟ ಮಾಡಲು ಅಂದಾಜು 20 ಕೆ.ಜಿ. ಗೋವಿನ ಮಾಂಸವನ್ನು ಕೊಂಡೊಯ್ಯುತ್ತಿದ್ದಾಗ ಕಾರ್ಯಕರ್ತರು ಅವರನ್ನು ತಡೆದು ವಿಚಾರಿಸಿದ್ದಾರೆ. ನಂತರ ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆಗೆ ಸ್ಪಂದಿಸಿದ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.