Kodagu

ಗಾಂಜಾ ಮಾರಾಟಕ್ಕೆ ಯತ್ನ: ರಾಜು ಬಂಧನ

admincoorgdaily

ಗಾಂಜಾ ಮಾರಾಟಕ್ಕೆ ಯತ್ನ:  ರಾಜು ಬಂಧನ
ಸೋಮವಾರಪೇಟೆ: ಚೌಡ್ಲು  ಗ್ರಾಮದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆಗೆ ಸೋಮವಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ 45 ಗ್ರಾಂ ಗಾಂಜಾ ಸಹಿತ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಬಂಧಿತನನ್ನು ರಾಜು ಎಚ್.ಎಂ. (65) ಎಂದು ಗುರುತಿಸಲಾಗಿದೆ. 

ಇವರು  ಮೂಲತಃ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದವರು. ಪ್ರಸ್ತುತ ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಮಾಲಂಬಿ ಗ್ರಾಮದಿಂದ 
ಗಾಂಜಾವನ್ನು ತಂದು ಚೌಡ್ಲು ಗ್ರಾಮದಲ್ಲಿ  ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

 ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಮುದ್ದು ಮಹದೇವ, ಸಬ್‌ಇನ್ಸ್‌ಪೆಕ್ಟರ್ ಖಾತಿಜ ಹಾಗೂ ಸಿಬ್ಬಂದಿಗಳಾದ ಧನಂಜಯ, ಅರುಣ್ ಮತ್ತು ಪ್ರದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.