Kodagu

ಮಡಿಕೇರಿಯಲ್ಲಿ MDMA ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ, 4.04 ಲಕ್ಷ ಮೌಲ್ಯದ ಡ್ರಗ್ಸ್ ವಶ

admincoorgdaily

ಮಡಿಕೇರಿಯಲ್ಲಿ MDMA ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ, 4.04 ಲಕ್ಷ ಮೌಲ್ಯದ ಡ್ರಗ್ಸ್ ವಶ
ಮಡಿಕೇರಿ;
ಮಡಿಕೇರಿ ನಗರದ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಮೈದಾನದಲ್ಲಿ MDMA ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 30-10-2026 ರಂದು ಮಡಿಕೇರಿ ನಗರದ ನಿವಾಸಿಗಳಾದ ರುಹೇಜ್, ಮೊಹಮ್ಮದ್ ಶಾಕೀಬ್ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾ ಸಂಖ್ಯೆ ಕೆ.ಎ 12ಬಿ 5552 ರ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ತಮ್ಮ ವಶದಲ್ಲಿ MDMA ಮಾದಕ ಪದಾರ್ಥವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಗುಪ್ತ ಕರ್ತವ್ಯದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ 81/2026 ಕಲಂ 22 ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ನಂತರ ಸ್ಥಳಕ್ಕೆ  ಅಧಿಕಾರಿಯವರೊಂದಿಗೆ ಹೋಗಿ ದಾಳಿ ನಡೆಸಿ ಆರೋಪಿಗಳಿಂದ MDMA ಮಾದಕ ಪದಾರ್ಥವನ್ನು ವಶಪಡಿಸಿಕೊಂಡು, ಆರೋಪಿಗಳಾದ ರುಹೇಜ್, ಮೊಹಮ್ಮದ್ ಶಾಕೀಬ್ ರವರನ್ನು ವಶಕ್ಕೆ ಪಡೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳಿಂದ ರೂ 4,04,000/- ಮೌಲ್ಯದ 11 ಗ್ರಾಂ MDMA ಮಾದಕ ಪದಾರ್ಥ, 5 ಮೊಬೈಲ್, 1-ಆಟೋ ರಿಕ್ಷಾ, 1-ತೂಕದ ಯಂತ್ರ ಹಾಗೂ 1-ಬ್ಯಾಗ್* ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.