Kodagu

ಕುಶಾಲನಗರದಲ್ಲಿ ಸುರಕ್ಷಿತ ಮತ್ತು ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ

admincoorgdaily

ಕುಶಾಲನಗರದಲ್ಲಿ ಸುರಕ್ಷಿತ ಮತ್ತು ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ
ಕುಶಾಲನಗರ: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ತ್ಯಜಿಸುವ ಮೂಲಕ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂಬ ಉದ್ದೇಶದಿಂದ ಶನಿವಾರ ಕೊಡಗು ಜಿಲ್ಲೆಯ ಕುಶಾಲನಗರ‌ ಪಟ್ಟಣದಲ್ಲಿ ಕುಶಾಲನಗರ‌ ಪುರಸಭೆ ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆ,  ಪರಿಸರ ಜಾಗೃತಿ ಆಂದೋಲನ ಸಮಿತಿ 
ಹಾಗೂ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವತಿಯಿಂದ ಸ್ವಚ್ಛ ಸಂಕಲ್ಪ ಮಾಸಾಚರಣೆ ಮತ್ತು ಪರಿಸರ
ಜನಜಾಗೃತಿ ಮೂಡಿಸಲಾಯಿತು.

 ಕುಶಾಲನಗರ ಪುರಸಭೆ ಕಛೇರಿಯ ಆವರಣದಿಂದ ಆರಂಭಗೊಂಡ ಹಸಿರು ದೀಪಾವಳಿ ಅಭಿಯಾನವು ಪಟ್ಟಣದ ಐ.ಬಿ.ರಸ್ತೆ , ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಮೂಲಕ  ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ಸಾಗಿ ಅಲ್ಲಿಂದ ಬಿ.ಎಂ.ರಸ್ತೆಯಲ್ಲಿ ಸಂಚರಿಸುವ ಮೂಲಕ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಸಿರು ದೀಪಾವಳಿ ಆಚರಿಸುವ ಕುರಿತು ಜನಜಾಗೃತಿ ಮೂಡಿಸಿತು.

ಹಸಿರು ದೀಪಾವಳಿ ಆಚರಣೆ ಕುರಿತಂತೆ ಹಣತೆ ಬೆಳಗಿಸಿ- ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ ಪರಿಸರ ಸಂರಕ್ಷಿಸಿ, ಪಟಾಕಿಮುಕ್ತ ದೀಪಾವಳಿ ಆಚರಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು ಜಾಥಾ ನಡೆಸಿದ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಿದರು.

  ಸುರಕ್ಷಿತ ಹಾಗೂ ಹಸಿರು ದೀಪಾವಳಿ ಆಚರಣೆ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಸಂಘಟಕ ಟಿ.ಜಿ.ಪ್ರೇಮಕುಮಾರ್, ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

 ದೇಶಾದಾದ್ಯಂತ ಹಸಿರು ದೀಪಾವಳಿ ಆಚರಣೆ:
2026 ಅಂಗವಾಗಿ ಹಸಿರು ದೀಪಾವಳಿ ಅಭಿಯಾನ 2026
 ಆಚರಿಸಲಾಗುತ್ತಿದ್ದು, ಈ ಮೂಲಕ  ಮಾಲಿನ್ಯಕಾರಿ ಪಟಾಕಿಯನ್ನು ತ್ಯಜಿಸಿ  ವಿಷಕಾರಿ ಅನಿಲಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾಲಿನ್ಯಕಾರಿ ಪಟಾಕಿ ತ್ಯಜಿಸುವ ಮೂಲಕ ಶಬ್ದ ಮತ್ತು ವಾಯು ಮಾಲಿನ್ಯವನ್ನು ತಪ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು. 

ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಸಿರು ದೀಪಾವಳಿಯನ್ನು  ಆಚರಿಸುಬೇಕಿದೆ. ಸ್ವಚ್ಛ, ಆರೋಗ್ಯಕರ ಮತ್ತು ಹಸಿರು ಭಾರತಕ್ಕೆ ಕೊಡುಗೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಪ್ರತಿಜ್ಞಾ ವಿಧಿ ಸ್ವೀಕರಿಸಿದ
ವಿದ್ಯಾರ್ಥಿಗಳು,  ನಾವು ಪರಿಸರ ಕಾಳಜಿಯನ್ನು ಹೊಂದಿರುವ ಜವಾಬ್ದಾರಿಯುತ ಭಾರತದ ಪ್ರಜೆಯಾಗಿ, ಈ ದೀಪಾವಳಿ ಹಬ್ಬವನ್ನು ಪ್ರಕೃತಿಯೊಂದಿಗೆ ಪ್ರೀತಿಯಿಂದ ಆಚರಿಸುವುದಾಗಿ ಹಾಗೂ
ಈ ನೆಲ- ಜಲ, ಪರಿಸರಕ್ಕೆ ಯಾವುದೇ ಧಕ್ಕೆಯನ್ನು ಉಂಟು ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.

     ಹಸಿರು ದೀಪಾವಳಿ ಆಚರಣೆಯ ಉದ್ದೇಶ ತಿಳಿಸಿದ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ಸೋಮಪ್ಪ ದೇವರಗುಂಡ,
ಹಸಿರು ದೀಪಾವಳಿ
ಆಚರಣೆಯು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಮತ್ತು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸುವ ಒಂದು ಪ್ರಮುಖ ಸಂಕಲ್ಪವಾಗಿದೆ. ಇಂತಹ ಜಾಗೃತಿ ಆಂದೋಲನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

    ಸ್ವಸ್ಥ ದೀಪಾವಳಿ,ಸ್ವಚ್ಛ ದೀಪಾವಳಿಯ ಆಚರಣೆಯ ಮಹತ್ವ ಕುರಿತು ಮಾತನಾಡಿದ
ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ‌ ಕೃಷ್ಣಪ್ರಸಾದ್, ಪ್ರತಿಯೊಬ್ಬರೂ ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ, ಎಲ್ಲೆಂದರಲ್ಲಿ ಕಸ ಹಾಕದೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಸ್ವಚ್ಛ ಸಂಕಲ್ಪ ಮಾಸಾಚರಣೆಗೆ ಕೈ ಜೋಡಿಸಬೇಕು ಎಂದರು.

 ಎಂದರು.
   ಪ್ರತಿಜ್ಞಾ ವಿಧಿ ಸ್ವೀಕರಿಸಿದ
ವಿದ್ಯಾರ್ಥಿಗಳು,  ನಾವು ಪರಿಸರ ಕಾಳಜಿಯನ್ನು ಹೊಂದಿರುವ ಜವಾಬ್ದಾರಿಯುತ ಭಾರತದ ಪ್ರಜೆಯಾಗಿ, ಈ ದೀಪಾವಳಿ ಹಬ್ಬವನ್ನು ಪ್ರಕೃತಿಯೊಂದಿಗೆ ಪ್ರೀತಿಯಿಂದ ಆಚರಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

 ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ,ಅಂಜೆಲಾ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಡಿ' ಸೋಜ, ಸ್ಕೌಟ್ಸ್, ಗೈಡ್ಸ್  ನ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್.ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಕೋಶಾಧಿಕಾರಿ ಎನ್.ಎಸ್.ನರೇಶ್,
 ಸಂಸ್ಥೆಯ ಪದಾಧಿಕಾರಿಗಳಾದ
ಇಂದಿರಾ ಮುತ್ತಣ್ಣ,
 ಕೆ.ಬಿ.ಗಣೇಶ್, ಡಿ.ವಿ.ಗಣೇಶ್, ಎಂ.ಎಸ್.ಮಹೇಂದ್ರ, ರಾಧಾ, 
ಪುರಸಭೆಯ
ಸಮುದಾಯ ಸಂಚಾಲಕಿ
ಆಲಿಯಾಬಾನು,   ಕಿರಿಯ ಆರೋಗ್ಯ ನಿರೀಕ್ಷಕಿ ನಿಶಾ, ಸಮುದಾಯ ಸಂಚಾಲಕಿ ಅನುಷ,ಸ್ಯಾನಿಟರಿ ಸೂಪರ್ ವೈಸರ್ ಮೋಹನ್ ಕುಮಾರ್, ಸಿಬ್ಬಂದಿ ದಿವ್ಯ , ಶಾಲಾ ಶಿಕ್ಷಕಿಯರಾದ
ಬಿ.ಎನ್. ರೇಖಾ , ಭವ್ಯ, ಪಲ್ಲವಿ, ಅನುಷ,
ಮತ್ತಿತರರು ಇದ್ದರು.