Kodagu

ತಲಕಾವೇರಿ ತೀರ್ಥೋದ್ಭವ ಹಿನ್ನೆಲೆ:ನಾಳೆ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ

admincoorgdaily

ತಲಕಾವೇರಿ ತೀರ್ಥೋದ್ಭವ  ಹಿನ್ನೆಲೆ:ನಾಳೆ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ
ಭಾಗಮಂಡಲ:
ತಲಕಾವೇರಿ  ದೇವಾಲಯದಲ್ಲಿ 2026-27ನೇ ಸಾಲಿನ "ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ “ ದಿನಾಂಕ: 17-10-2026 ರಂದು ಜರುಗಲಿರುವುದರಿಂದ, ಈ ಕುರಿತು ಪೂರ್ವ ಸಿದ್ದತೆ ಬಗ್ಗೆ ಚರ್ಚಿಸಲು ದಿನಾಂಕ: 16-09-2026 ರ ಬುಧವಾರ "ಅಪರಾಹ್ನ 03:30" ಗಂಟೆಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶಾಸಕರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ "ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿ ಕಟ್ಟಡದಲ್ಲಿ" ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ.