Kodagu

ಕೊಡಗು ಜಿಲ್ಲೆಯಲ್ಲಿ ಪ್ರೆಷರ್ ಮಿಡ್ ಧ್ವನಿವರ್ಧಕ ಬಳಕೆಗೆ ನಿಷೇಧ: ಜಿಲ್ಲಾಧಿಕಾರಿ ಆದೇಶ

admincoorgdaily

ಕೊಡಗು ಜಿಲ್ಲೆಯಲ್ಲಿ ಪ್ರೆಷರ್ ಮಿಡ್ ಧ್ವನಿವರ್ಧಕ ಬಳಕೆಗೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ಮಡಿಕೇರಿ, ಸೆ.11: ಗೌರಿ-ಗಣೇಶ, ದಸರಾ ಸೇರಿದಂತೆ ಇತರೆ ಹಬ್ಬಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಧ್ವನಿವರ್ಧಕಗಳಲ್ಲಿ Pressure Mid ಅಳವಡಿಸುವುದನ್ನು ಮತ್ತು Pressure Mid ಅಳವಡಿಸಿದ ಧ್ವನಿವರ್ಧಕಗಳನ್ನು ಬಳಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸೋಮಶೇಖರ್ ಎಸ್.ಜೆ. ಭಾ.ಆ.ಸೇ. ಅವರು ಆದೇಶ ಸಂಖ್ಯೆ: ಎಂಎಜಿ/ಇತರೆ/38/2026-27 ದಿನಾಂಕ 11/09/2026‌ ರಂತೆ ಈ ಆದೇಶ ಹೊರಡಿಸಿದ್ದಾರೆ.

ಹಿನ್ನೆಲೆ:
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಪತ್ರ ಸಂಖ್ಯೆ ಎಸ್‌ಬಿ/ಡಿಸಿ/ಸಿಸಿಆರ್/2026 ದಿನಾಂಕ 31/08/2026 ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಮಡಿಕೇರಿ ಅವರ ಪತ್ರ ಸಂಖ್ಯೆ ಮಾನಿಮಂ/ಪ್ರಾ.ಕ/ಕೊಡಗು/2026-27/260 ದಿನಾಂಕ 07/09/2026 ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಹಿಂದಿನ ವರ್ಷಗಳಲ್ಲಿ ನಿಯಮಕ್ಕಿಂತ ಹೆಚ್ಚು ಶಬ್ದ ಹೊರಡಿಸುವ ಮತ್ತು ಶಬ್ದ ಮಾಲಿನ್ಯ ಉಂಟುಮಾಡುವ ಧ್ವನಿವರ್ಧಕಗಳನ್ನು ಬಳಸಿದ್ದು ಕಂಡುಬಂದಿದೆ. ಕೆಲವು ಧ್ವನಿವರ್ಧಕಗಳಲ್ಲಿ ತೀವ್ರತೆಯನ್ನು ಹೆಚ್ಚಿಸಲು ಧ್ವನಿವರ್ಧಕಗಳಲ್ಲಿ Pressure Mid ಅಳವಡಿಸಿ ಬಳಸುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಮತ್ತು ತೊಂದರೆಯಾಗಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ನಿಷೇಧ ಅಗತ್ಯ ಎಂದು ಜಿಲ್ಲಾಡಳಿತ ತಿಳಿಸಿದೆ.

ನಿಷೇಧದ ಅವಧಿ:
ದಿನಾಂಕ *14/09/2026 ರಿಂದ 31/10/2026 ರವರೆಗೆ ಜಿಲ್ಲೆಯಾದ್ಯಂತ ಈ ನಿಷೇಧ ಜಾರಿಯಲ್ಲಿರುತ್ತದೆ. The Noise Pollution (Regulation and Control) Rules, 2000 ನಿಯಮ 8 ಮತ್ತು ಪೊಲೀಸ್ ಕಾಯ್ದೆ 1963 ಕಲಂ 35 ರಲ್ಲಿನ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.

ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.