ಬ್ಯಾಂಕ್ ಮುಷ್ಕರ ಹಿಂತೆಗೆತ;ಇಂದು ಎಂದಿನಂತೆ ಬ್ಯಾಂಕ್ ಓಪನ್!
admincoorgdaily

ನವದೆಹಲಿ, ಸೆ. 28:ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಹಿಂತೆಗೆದುಕೊಂಡಿವೆ. ಭಾನುವಾರ ರಾತ್ರಿ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಜೊತೆ ನಡೆದ ಮಾತುಕತೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಸೋಮವಾರ ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆ. 28 ರಿಂದ 30ರವರೆಗೆ ಐದು ದಿನಗಳ ಕೆಲಸದ ವಾರಕ್ಕೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿತ್ತು. ಈಗ IBA ಬೇಡಿಕೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ಒಪ್ಪಿಕೊಂಡಿದೆ.
ಸಮಿತಿಯು ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನವನ್ನಾಗಿ ಮಾಡುವ ಬಗ್ಗೆ ಪರಿಗಣಿಸಲಿದ್ದು, ಇತರ ಆಯ್ಕೆಗಳನ್ನು ಅಧ್ಯಯನ ಮಾಡಿ ಗ್ರಾಹಕರು ಸೇರಿದಂತೆ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಿದೆ. ಪ್ರಸ್ತುತ ಬ್ಯಾಂಕ್‌ಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಿರುತ್ತವೆ.
ಐದು ದಿನಗಳ ಕೆಲಸದ ವಾರವನ್ನು ಇನ್ನೂ ಅನುಮೋದಿಸಲಾಗಿಲ್ಲ ಮತ್ತು ನಿರ್ಧಾರಕ್ಕೆ ಯಾವುದೇ ಗಡುವನ್ನು UFBU ಸುತ್ತೋಲೆಯಲ್ಲಿ ನಿಗದಿಪಡಿಸಿಲ್ಲ.