Kodagu

ಭಾರತದ ಆರ್ಥಿಕತೆಯಲ್ಲಿ ಬ್ಯಾಂಕ್ ಹಾಗೂ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ : ಡಾ. ಕೆ.ಸಿ.ದಯಾನಂದ

admincoorgdaily

ಭಾರತದ ಆರ್ಥಿಕತೆಯಲ್ಲಿ ಬ್ಯಾಂಕ್ ಹಾಗೂ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ : ಡಾ. ಕೆ.ಸಿ.ದಯಾನಂದ
ಮಡಿಕೇರಿ;ಯಾವುದೇ ದೇಶವು ಅಭಿವೃದ್ದಿಯನ್ನು ಕಾಣಬೇಕಾದರೆ ಹಣಕಾಸು ಸಂಸ್ಥೆಯಾದ  ಬ್ಯಾಂಕ್ ಹಾಗೂ  ವಿಮೆಗಳು ಬಹಳ ಮುಖ್ಯ  ಎಂದು ವಿರಾಜಪೇಟೆ ಸ.ಪ್ರ.ದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಸಿ. ದಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.


ವಿರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ ಹಾಗೂ ಅರ್ಥಶಾಸ್ತ್ರ  ವಿಭಾಗದ ವತಿಯಿಂದ ಕೌಸ್ತುಭ ಸಭಾ ಭವನದಲ್ಲಿ ಬುಧವಾರ  ಆಯೋಜಿಸಲಾದ  ಬ್ಯಾಂಕ್ ಮತ್ತು ವಿಮೆಗಳ ಕುರಿತು  ಉಪನ್ಯಾಸ  ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬ್ಯಾಂಕ್ ಒಂದು ಆರ್ಥಿಕ ಸಂಸ್ಥೆಯಾಗಿದ್ದು ಇದು ಜನರಿಂದ ಠೇವಣಿ ಸಂಗ್ರಹಿಸಿ ಜನರಿಗೆ  ಸಾಲ ಸೌಲಭ್ಯಗಳನ್ನು ನೀಡುತ್ತದೆ.  ಬ್ಯಾಂಕ್  ಆರ್ಥಿಕ ಹಾಗೂ ಇತರೆ ವಲಯಗಳಿಗೆ  ಹಣವನ್ನು ಕಳುಹಿಸುವ ಕೆಲಸವನ್ನು ಮಾಡುತ್ತದೆ. ಆರ್ಥಿಕತೆಯಲ್ಲಿ ಹಣಕಾಸಿನ ಅಂತರ್ಗತ ಆಗಬೇಕಾದರೆ  ಬ್ಯಾಂಕ್ ಅತಿಮುಖ್ಯ . ಕೃಷಿ , ಕೈಗಾರಿಕೆ , ವ್ಯಾಪಾರ , ವ್ಯವಹಾರ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು  ಕಾಯ್ದುಕೊಳ್ಳಬೇಕಾದರೆ  ಬ್ಯಾಂಕ್ ಹಾಗೂ ಆರ್ಥಿಕ ವಲಯ ಮಹತ್ವದ  ಪಾತ್ರವನ್ನು ವಹಿಸುದರೊಂದಿಗೆ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿ.  ಪ್ರಸ್ತುತ ಕಾಲಘಟ್ಟದಲ್ಲಿ ಬ್ಯಾಂಕಿನಿಂದ ವಿವಿಧ ರೀತಿಯ ಸೇವೆಗಳು ಲಭ್ಯವಿದ್ದು ಅದರಲ್ಲೂ ದಿನದ 24 ಗಂಟೆಗಳಲ್ಲೂ ಹಣ ಸಂದಾಯ ಮಾಡುವ ಅವಕಾಶ ಇತ್ತೀಚಿನ ದಿನಗಳಲ್ಲಿದೆ. ಆದರೂ ವಂಚನೆಯ ಪ್ರಕರಣಗಳು ಹೆಚ್ಚುತ್ತಿದೆ. ಆದರಿಂದ ಬಹಳ ಜಾಗರೂಕತೆಯಿಂದ ಹಣಕಾಸಿನ ವ್ಯವಹಾರ ನಡೆಸಬೇಕೆಂದು ಸಲಹೆ ನೀಡಿದರು.  ಮುಂದುವರೆದು ಸಾರ್ವಜನಿಕ ವಲಯದಲ್ಲಿ ವಿಮೆಗೆ ಅಷ್ಟೊಂದು ಮಹತ್ವ ಇರಲಿಲ್ಲ  
ಕೋವಿಡ್ ನ ನಂತರ ಜನ ಸಾಮಾನ್ಯರು ವಿಮೆಗಳಿಗೆ ಪ್ರಾಮುಖ್ಯತೆ ನೀಡಲು ಆರಂಭಿಸಿದ್ದಾರೆ.
ವಿಮೆಗಳು ಅನಿರೀಕ್ಷಿತವಾಗಿ ಬರುವ ಅಪಾಯಗಳಿಂದ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸುತ್ತದೆ. ವಿಮೆಯು ನಮ್ಮ ಜೀವ ಹಾಗೂ ಜೀವನವನ್ನು ಉಳಿಸುತ್ತದೆ. ದೀರ್ಘಕಾಲದ ಆರ್ಥಿಕ ಹೂಡಿಕೆಗೂ ವಿಮೆ ಸಹಕಾರಿಯಾಗಿದೆ.  ಆದರಿಂದ ಎಲ್ಲಾರು ವಿಮೆಗಳನ್ನು ಮಾಡಿಸಿಕೊಳ್ಳುದು ಉತ್ತಮ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ.ಜಿ ವೀಣಾ  ಪ್ರಸ್ತುತ ದಿನಗಳಲ್ಲಿ ಬ್ಯಾಂಕ್ ಸೌಲಭ್ಯವು ಬೆರಳ ತುದಿಗೆ ಬಂದು ತಲುಪಿದ್ದು ಸೇವೆ ಸೌಲಭ್ಯಗಳಲ್ಲಿ ಎಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆಯೋ ಅಷ್ಟೇ ಸಮಸ್ಯೆಯನ್ನು ಕೂಡ ತಂದುಡ್ಡುತ್ತಿದೆ ಲಿಂಕ್ಗಳ ಮೂಲಕ ಓ ಟಿ ಪಿ ಗಳ ಮೂಲಕ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಲಪಟ ಇಸುವಾ ಕೆಲಸವು ನಡೆಯುತ್ತಿದೆ ಆದ್ದರಿಂದ ಹಣಕಾಸು ಅಪ್ಲಿಕೇಶನ್ ಗಳನ್ನು ಬಳಸುವ ಸಂದರ್ಭ ಜಾಗರೂಕತೆ ಅತಿ ಮುಖ್ಯ ಇನ್ನು ವಿಮೆಯು ಜೀವನದಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಅನಿಶ್ಚಿತವಾಗಿ ಬರುವ ಸಮಸ್ಯೆಗಳು ಹಾಗೂ ಸಾವಿನ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಕುಸಿಯದಂತೆ ಕಾಪಾಡುವಲ್ಲಿ ವಿಮೆ ಬಹಳ ಮುಖ್ಯ ಎಂದರು .

ಕಾರ್ಯಕ್ರಮದ ವೇದಿಕೆ ಮೇಲೆ ಕಾಲೇಜಿನ  ಐಕ್ಯೂಎಸ್‌ಸಿ ಸಂಯೋಜಕರಾದ ರಾಘವೇಂದ್ರ,  ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರ, ಅರ್ಥ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬಾಬು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು .