Kodagu

ಜೇನುಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಪೊನ್ನಂಪೇಟೆಯಲ್ಲಿ ಜೇನುಕೃಷಿಕರ ಸಮಾವೇಶ

admincoorgdaily

ಜೇನುಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಪೊನ್ನಂಪೇಟೆಯಲ್ಲಿ ಜೇನುಕೃಷಿಕರ ಸಮಾವೇಶ
ಮಡಿಕೇರಿ: ಜೇನುಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ಅ.೬ರಂದು ಬೆಳಗ್ಗೆ ೧೦.೩೦ಕ್ಕೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜೇನುಕೃಷಿಕರ ಸಮಾವೇಶ ಆಯೋಜಿಸಲಾಗಿದೆ ಎಂದು ಘಟಕದ ಮುಖ್ಯಸ್ಥ ಡಾ.ಆರ್.ಎನ್.ಕೆಂಚರೆಡ್ಡಿ ತಿಳಿಸಿದ್ದಾರೆ.

ಸಮಾವೇಶವನ್ನು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಜಿ.ಎಂ.ದೇವಗಿರಿ, ಡಾ.ಮೋಹನರಾವ್, ಡಾ.ಸಿ.ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ. ಕೊಡಗಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಸಣ್ಣ ದುಂಬಿ ನಿರ್ವಹಣೆ, ಜೇನು ಕುಟುಂಬ ನಿರ್ವಹಣೆಯ ನೂತನ ತಂತ್ರಜ್ಞಾನ, ಸ್ಥಳಾಂತರ ಜೇನುಕೃಷಿಯ ಸವಾಲು-ಪರಿಹಾರದ ಬಗ್ಗೆ ೨೦೦ಕ್ಕೂ ಹೆಚ್ಚು ಪ್ರಗತಿಪರ ರೈತರೊಂದಿಗೆ ಚರ್ಚೆ ನಡೆಯಲಿದೆ. ವ್ಯಾಪಾರೋದ್ಯಮಿಗಳ ಸಂಪರ್ಕಕ್ಕೂ ಅವಕಾಶ ಕಲ್ಪಿಸಲಾಗಿದೆ. ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಸ್ತರಣಾ ಶಿಕ್ಷಣ ಘಟಕದ ಪ್ರಮುಖರಾದ ಡಾ.ಹೇಮಂತ್ ಕುಮಾರ್, ಡಾ.ಲತಾ ಇದ್ದರು.