ಭರತನಾಟ್ಯ ಪರೀಕ್ಷೆ: ವಿರಾಜಪೇಟೆ 'ನಾಟ್ಯಾಂಜಲಿ ನೃತ್ಯ ಸಂಸ್ಥೆ'ಗೆ ಶೇ. 100 ಫಲಿತಾಂಶ
admincoorgdaily

ವಿರಾಜಪೇಟೆ: ಇತ್ತೀಚೆಗೆ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶೇಕಡಾ 100ರಷ್ಟು ಫಲಿತಾಂಶ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿನಿಯರು ಅತ್ಯುತ್ತಮ ಅಂಕಗಳೊAದಿಗೆ ಉನ್ನತ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಸಂಸ್ಥೆಗೆ, ಗುರುಗಳಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರಾವ್ಯ ಪಿ.ಎ., ದೀಪ್ತಿ ಪಿ. ವಂದನಾ ಕೆ. ಎಸ್., ಚೆರೀಶ್ ಚೋಂದಮ್ಮ, ಅಂಜನಾ ಟಿ.ಡಿ. ಕೀರ್ತನ ಪಿ. ಎಂ., ನೇಸರ ಎ. ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಸಂಸ್ಥಾಪಕ ಗುರುಗಳಾದ ವಿದುಷಿ ಹೇಮಾವತಿ ಕಾಂತ್ ರಾಜ್ ಹಾಗೂ ವಿದುಷಿ ಕಾವ್ಯಶ್ರೀ ಕಾಂತ್ ರಾಜ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ.