Kodagu

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ನಾಟ್ಯ ನಂದಿನಿ ಮತ್ತು ಸ್ವರ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

admincoorgdaily

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ನಾಟ್ಯ ನಂದಿನಿ ಮತ್ತು ಸ್ವರ ಕಲಾವಿದರಿಂದ ಭರತನಾಟ್ಯ ಪ್ರದರ್ಶನ
ವಿರಾಜಪೇಟೆ: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 48ನೇ ಗೋಣಿಕೊಪ್ಪಲು ದಸರಾ ಮಹೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಗ್ಗಳದ ನಾಟ್ಯ ನಂದಿನಿ ಭರತನಾಟ್ಯ ಶಾಲೆ ಮತ್ತು ವಿರಾಜಪೇಟೆಯ ಸ್ವರ ಕ್ಲಾಸಿಕಲ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಪ್ರಸ್ತುತಪಡಿಸಿದರು.

   ನೃತ್ಯ ಶಿಕ್ಷಕಿ ಚೈತ್ರಾ ಅವರ ಮಾರ್ಗದರ್ಶನದಲ್ಲಿ ಕುಮಾರಿ ಮಮತಾ, ಕುಮಾರಿ ಮಾನ್ಯಾ, ಕುಮಾರಿ ರಿಷಿಕಾ, ಕುಮಾರಿ ಧನ್ವಿ, ಕುಮಾರಿ ಹೀರ್ಹರಿನ್, ಕುಮಾರಿ ಶ್ರೀಧಿಕಾ ಹಾಗೂ ಕುಮಾರಿ ಬೃಂದಾ ಅವರು ಆಕರ್ಷಕವಾಗಿ ಭರತನಾಟ್ಯ ಪ್ರದರ್ಶನ ನೀಡಿದರು.

  ಕಾರ್ಯಕ್ರಮದಲ್ಲಿ ಮಾಸ್ಟರ್ ಹೀರ್ಹರಿನ್, ಮಾಸ್ಟರ್ ಲಕ್ಷಿತ್ ಶೆಟ್ಟಿ ಬಿ.ಎನ್, ಮಾಸ್ಟರ್ ದ್ರುಪದ್ ದೇವ್ ಎಸ್. ನಾಯರ್, ಶ್ರೀಮತಿ ಸ್ವಪ್ನಾ ಸುರೇಶ್, ರೆಜಿ ಸುಮೇಶ್ ಹಾಗೂ ಸುಜಾತಾ ಬಿ.ಆರ್.ಇದ್ದರು.