Kodagu

ಬಿಳಿಗೇರಿ ಕೊಡವ ಸಮಾಜದ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಮುದಾಯದ ಚಟುವಟಿಕೆಗಳಿಗಾಗಿ ಸರ್ಕಾರಿ ಜಾಗ ಮಂಜೂರಾತಿಗೆ ಶಾಸಕ ಪೊನ್ನಣ್ಣ ಅವರಿಗೆ ಮನವಿ

admincoorgdaily

ಬಿಳಿಗೇರಿ ಕೊಡವ ಸಮಾಜದ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಮುದಾಯದ ಚಟುವಟಿಕೆಗಳಿಗಾಗಿ ಸರ್ಕಾರಿ ಜಾಗ ಮಂಜೂರಾತಿಗೆ ಶಾಸಕ ಪೊನ್ನಣ್ಣ ಅವರಿಗೆ ಮನವಿ
ಮಡಿಕೇರಿ:
ಬಿಳಿಗೇರಿ ಕೊಡವ ಸಮಾಜದ ಪ್ರಮುಖರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ  ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಭೇಟಿಯಾಗಿ, ಕೊಡವ ಸಮಾಜದ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಮುದಾಯದ ಚಟುವಟಿಕೆಗಳಿಗಾಗಿ, ಬಿಳಿಗೇರಿ ಭಾಗದಲ್ಲಿ ಸರಕಾರಿ ಜಾಗವನ್ನು ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

   ಮನವಿಯನ್ನು ಸ್ವೀಕರಿಸಿ ಪೂರಕವಾಗಿ ಸ್ಪಂದಿಸಿದ  ಶಾಸಕರು, ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮoಞೀರ ಸಾಬು ತಿಮ್ಮಯ್ಯ, ಉಪಾಧ್ಯಕ್ಷರಾದ ಕೋಟೆರ  ಮುತ್ತಣ್ಣ, ಈರಪ್ಪ, ಮಂಡುವಂಡ ಕೌಶಿಕ್, ಮoಞೀರ ಕುಟ್ಟಪ್ಪ, ಕಣ್ಣಚಂಡ ಗಿರೀಶ್, ಕಣ್ಣಚಂಡ ಕಾವೇರಪ್ಪ, ಬಿಳಿಗೇರಿ ಕೊಡವ ಸಮಾಜದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.