ಕುಶಾಲನಗರದಲ್ಲಿ ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ
admincoorgdaily

ಕುಶಾಲನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ಕುಶಾಲನಗರದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ತಿಳಿಸಿದರು.
ನಗರದ ಕೊಪ್ಪ ಸೇತುವೆ ಬಳಿ ಮಾತನಾಡಿದ ಅವರು, "25 ವರ್ಷಗಳ ಕಾಲ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ದೇಶಕ್ಕೆ ಒಳ್ಳೆಯ ಕೆಲಸ ಮಾಡಿರುವ ಮೋದಿಜಿ ಅವರ ಹುಟ್ಟುಹಬ್ಬ ಮತ್ತು ಗಾಂಧಿ ಜಯಂತಿ ಪ್ರಯುಕ್ತ ಸಾಂಕೇತಿಕವಾಗಿ ಕಸ ಎತ್ತುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ" ಎಂದು ಹೇಳಿದರು.
"ಕೊಡಗು ಜಿಲ್ಲೆಯಲ್ಲಿ ಸುಮಾರು 60 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ 40-46 ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಮೂಲ ಉದ್ದೇಶ ಜನರಿಗೆ ಜಾಗೃತಿ ಮೂಡಿಸುವುದು. ಕಸವನ್ನು ಬೀದಿಯಲ್ಲಿ ಹಾಕಬಾರದು. ವಿದೇಶಗಳಿಗೆ ಹೋಗಿ ಬಂದವರು ಅಲ್ಲಿ ಬಹಳ ಕ್ಲೀನ್ ಇದೆ ಎನ್ನುತ್ತಾರೆ. ಆದರೆ ಇಲ್ಲಿ ಬಂದಾಗ ಕ್ಲೀನ್ ಮಾಡುವುದಿಲ್ಲ. ಹಾಗಾಗಿ ಜನರಲ್ಲಿ ಅರಿವು ಮೂಡಿಸಲು ಈ ಅಭಿಯಾನ" ಎಂದು ಅಪ್ಪಚ್ಚು ರಂಜನ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಬಿಜೆಪಿ ನಗರದ ಅಧ್ಯಕ್ಷ ಚರಣ್ ಮಾಜಿ ಪುರಸಭೆ ಸದಸ್ಯ ಅಮೃತ್ ಬಿಜೆಪಿ ಯುವ ಮುಖಂಡ ಸುಮನ್ ಗೌಡ ಸಚಿನ್ ಕಾರ್ಯಕರ್ತರು ಉಪಸ್ಥಿತರಿದ್ದರು.