ಬಿಜೆಪಿ ಜನಜಾಗೃತಿ ಜಾಥಾ ಮುಂದೂಡಿಕೆ
admincoorgdaily

ಮಡಿಕೇರಿ:ನಾಳೆ (ನ.20) ನಡೆಯಬೇಕಾಗಿದ್ದ ಬಿಜೆಪಿಯ ಜನಜಾಗೃತಿ ಜಾಥಾ ಹಾಗೂ ಪ್ರತಿಭಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲೆಯ ಸರಸಂಘಚಾಲಕರಾದ ಚೆಕ್ಕೆರ ಮನು ಕಾವೇರಪ್ಪ ಅವರು ಇಂದು ನಿಧನರಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕೊಡಗು ಜಿಲ್ಲಾ ಬಿಜೆಪಿ ತಿಳಿಸಿದೆ.