Kodagu

ಪ್ರತಿ ಮನೆ, ಪ್ರತಿ ಬೂತ್‌ನಲ್ಲಿ ಸೆ.17ರಂದು ಆಶೀರ್ವಾದ ದೀಪ: ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ

admincoorgdaily

ಪ್ರತಿ ಮನೆ, ಪ್ರತಿ ಬೂತ್‌ನಲ್ಲಿ ಸೆ.17ರಂದು ಆಶೀರ್ವಾದ ದೀಪ: ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ
ಮಡಿಕೇರಿ: ಪ್ರಧಾನಿ ಮೋದಿ ಅವರ 25 ವರ್ಷಗಳ ಸೇವೆಯ ಸ್ಮರಣಾರ್ಥ ಸೆ.17ರಂದು ದೇಶಾದ್ಯಂತ ಪ್ರತಿ ಮನೆ, ಪ್ರತಿ ಬೂತ್‍ನಲ್ಲಿ ಆಶೀರ್ವಾದ ದೀಪ ಬೆಳಗಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.

ಸೆ.17ರಿಂದ ಅ.17ರವರೆಗೆ ನಡೆಯುವ ಸೇವಾ ಸಂಕಲ್ಪ ಅಭಿಯಾನದಲ್ಲಿ ರಕ್ತದಾನ, ವೃದ್ಧಾಶ್ರಮ ಭೇಟಿ, ಸ್ವಚ್ಛತೆ, ಆರೋಗ್ಯ ಶಿಬಿರ, ಗ್ರಾಮ ದತ್ತು ಸೇರಿದಂತೆ 12 ಕಾರ್ಯಕ್ರಮ ನಡೆಯಲಿದೆ ಎಂದರು.ಈ ವೇಳೆ ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಆದೇಶ ಖಂಡಿಸಿ, ರಾಷ್ಟ್ರಗೀತೆಗೆ ಅಪಚಾರ ಸಹಿಸಲ್ಲ, ಎಲ್ಲ ಚರಣ ಹಾಡುವಂತೆ ಒತ್ತಾಯಿಸಿ ಜಾಥಾ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿ.ಕೆ.ಲೋಕೇಶ್, ಸುನಿಲ್ ಸುಬ್ರಮಣಿ, ಅನಿತಾ ಪೂವಯ್ಯ ಇದ್ದರು.